ಗಾಂಧಿನಗರ :ಕೆ ಎಂ ಜೆ, ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ವತಿಯಿಂದ ಸ್ವಾತಂತ್ರ್ಯ ಸೌಹಾರ್ದ ಸಂಗಮ

0

ಸ್ವಾತಂತ್ರ ಪೂರ್ವದ ಸೌಹಾರ್ದತೆ ಮತ್ತು ಹುತಾತ್ಮರ ಬಲಿದಾನವನ್ನು ಎಂದಿಗೂ ಮರೆಯ ಬಾರದು:ಅಮ್ಮಾರ್ ಮುಹೀನಿ

ಸಂವಿದಾನವನ್ನು ಅರಿತು ಬಾಳಬೇಕು:ಅಶೋಕ್ ಎಡಮಲೆ

ವ್ಯಾಪಾರದ ಉದ್ದೇಶದಿಂದ ನಮ್ಮ ದೇಶಕ್ಕೆ ಬಂದ ಬ್ರಿಟಿಷರು ಸುಮಾರು 190 ವರ್ಷಗಳ ಕಾಲ ನಮ್ಮ ದೇಶವನ್ನು ಆಳ್ವಿಕೆ ಮಾಡಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಕೊನೆಗೆ ದೇಶದ ಸೌಹಾರ್ದತೆ ಮತ್ತು ಒಗ್ಗಟ್ಟಿನ ಹೋರಾಟದ ಮುಂದೆ ಸೋತು ನಮ್ಮ ದೇಶವನ್ನು ಸ್ವತಂತ್ರಗೊಳಿಸಿ ತಮ್ಮದೇಶಕ್ಕೆಹೋಗಬೇಕಾಯಿತು.ಆ ಒಗ್ಗಟ್ಟು, ಸೌಹಾರ್ಧತೆಯನ್ನು ಮತ್ತು ಅಂದು ಮಡಿದ ಹುತಾತ್ಮರನ್ನು ನೆನಪಿಸುವುದು ಪ್ರಸ್ತುತ ನಮ್ಮ ದೇಶಕ್ಕೆ ಅನಿವಾರ್ಯವಾಗಿದೆ ಎಂದು ಅಮ್ಮಾರ್ ಮುಹೀನಿ ಉಸ್ತಾದ್ ರವರು ತಮ್ಮ ಸಂದೇಶ ಭಾಷಣ ದಲ್ಲಿ ನುಡಿದರೆ ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅತಿಥಿ ಯಾಗಿ ಆಗಮಿಸಿದ ಅಶೋಕ್ ಎಡಮಲೆ ಯವರು ಮಾತನಾಡಿ ‘ನಮ್ಮ ದೇಶದ ಸಂವಿದಾನ ವನ್ನು ಅರಿತು ಅದರಂತೆ ಈ ದೇಶದ ಅಭಿವೃದ್ದಿ ಯಲ್ಲಿ ನಮ್ಮನ್ನು ನಾವು ತೊಡಗಿಸಬೇಕು ಎಂದು ಯುವ ಸಮುದಾಯವನ್ನು ಉದ್ದೇಶಿಸಿ ಹೇಳಿದರು.

ಗಾಂಧಿನಗರದ ಸುನ್ನಿ ಸೆಂಟರ್ ವಠಾರದಲ್ಲಿ ಆ 17 ರಂದು ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ, ಸುನ್ನಿ ಯುವ ಜನ ಸಂಘ ಸುಳ್ಯ ಸರ್ಕಲ್, ಹಾಗೂ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಸುಳ್ಯ ಸೆಕ್ಟರ್ ಇದರ ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ಸೌಹಾರ್ದ ಸಂಗಮ ದಲ್ಲಿ ಇವರುಗಳು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಬಹು ಅಬ್ದುಲ್ ರಜ್ಜಾಕ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿದರು.ಕೆ ಎಂ ಜೆ ಸುಳ್ಯ ಸರ್ಕಲ್ ಅದ್ಯಕ್ಷರಾದ ಮುಸ್ತಾಫಾ ಮೊಗರ್ಪಣೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೌನ್ಸಿಲರ್ ಕೆ ಎಂ ಅಬ್ದುಲ್ ಹಮೀದ್ ಸುಣ್ಣಮೂಲೆ ಸ್ವಾಗತಿಸಿ
ಸುಳ್ಯ ಸೂಡ ಅದ್ಯಕ್ಷರಾದ ಹಾಜಿ ಮುಸ್ತಫಾ ಜನತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸುಳ್ಯ ಅಲ್ಪ ಸಂಖ್ಯಾತ ಸಹಕಾರಿ ಸಂಘದ ಅಧ್ಯಕ್ಷ ಇಕ್ಬಾಲ್ ಎಳಿಮಲೆರವರು ಶುಭ ಹಾರೈಸಿ ಮಾತನಾಡಿ ದರು.

ವೇದಿಕೆಯಲ್ಲಿ ಸರ್ಕಲ್ ಉಸ್ತುವಾರಿ ಅಬ್ದುಲ್ ರಹ್ಮಾನ್ ಹಾಜಿ ಕುಂಭಕ್ಕೋಡ್,ಗಾಂಧಿನಗರ ಜಮಾಅತ್ ಕಮಿಟಿ ಅಧ್ಯಕ್ಷರಾದ ಕೆ ಎಂ ಎಸ್ ಮುಹಮ್ಮದ್ ಹಾಜಿ, ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್, ಕೆ ಎಂ ಜೆ ಸುಳ್ಯ ಝೋನ್ ಅದ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಎಸ್ ಎಂ ಎ ಜಿಲ್ಲಾ ಕೋಶಧಿಕಾರಿ ಅಬ್ದುಲ್ ಲತೀಫ್ ಹರ್ಲಡ್ಕ, ಅಡ್ವಕೆಟ್ ಅಬೂಬಕ್ಕರ್ ಅಡ್ಕಾರ್, ಮೂಸಾ ಪೈಂಬೆಚ್ಚಾಲ್, ಮೊದಲಾದವರು
ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘಟನೆಗಳ ಪ್ರತಿನಿಧಿ ಗಳು,ಸದಸ್ಯರುಗಳು ಭಾಗವಸಿದ್ದರು.

ಸುಳ್ಯ ಅನ್ಸಾರಿಯ ಸಂಸ್ಥೆಯ ಮುದರ್ರಿಸ್ ಅಬೂಬಕ್ಕರ್ ಹಿಮಮಿ ಸಖಾಫಿ ಸಮಾರೋಪ ಪ್ರಾರ್ಥನೆ ನೆರವೇರಿಸಿದರು. ಕೆ ಎಂ ಜೆ ಸುಳ್ಯ ಸರ್ಕಲ್ ಕಾರ್ಯದರ್ಶಿ ಅಬ್ದುಲ್ ಖಾದರ್ ಹಣಗೇರಿ ಕಾರ್ಯಕ್ರಮ ನಿರೂಪಿಸಿದರು.
ಸಾದಿಕ್ ವಂದಿಸಿದರು.
ಕಾರ್ಯಕ್ರಮದಲ್ಲಿ ಉಸ್ತಾದ್ ಅಮ್ಮಾರ್ ಮುಹೀನಿ ಹಾಗೂ ಅಶೋಕ್ ಎಡಮಲೆ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.