ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ರಕ್ಷಣೆ
ಸುಳ್ಯ ಶಾಂತಿನಗರದಲ್ಲಿ ಮಹಿಳೆಯೊಬ್ಬರು ಬಾವಿಗೆ ಬಿದ್ದಿದ್ದು, ಅವರನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ ಘಟನೆ ವರದಿಯಾಗಿದೆ.















ಮಹಿಳೆ ಮನೆ ಸಮೀಪ ಬಾವಿಗೆ ಬಿದ್ದರೆಂದೂ ವಿಷಯ ತಿಳಿದು ಸ್ಥಳೀಯರು ಹೋದರು. ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಲಾಯಿತು. ಸ್ಥಳೀಯರಾದ ಮುಳುಗುತಜ್ಞ ಅಬ್ಬಾಸ್ ನೀರಿಗಿಳಿದು ಮಹಿಳೆಯನ್ನು ಅಗ್ನಿಶಾಮಕ ದಳದವರ ಸಹಕಾರದಿಂದ ಮೇಲೆತ್ತಿದರೆಂದೂ ತಿಳಿದುಬಂದಿದೆ. ಅಸ್ವಸ್ಥಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.










