ಸತತವಾಗಿ ಪ್ರಯತ್ನಿಸಿ
ರೂ. 5 ಸಾವಿರ ನಗದು ಬಹುಮಾನ ಗಿಟ್ಟಿಸಿಕೊಂಡ ಯುವಕ ಜಗದೀಶ್ ಅಡಿಗರ
ಸುಳ್ಯ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ
ಈ ವರ್ಷದ ವಿಶೇಷ ಸ್ಪರ್ಧೆಯಾಗಿ ಹಮ್ಮಿಕೊಂಡ ಎಣ್ಣೆ ಕಂಬ ಏರುವ ಸ್ಪರ್ಧೆಯಲ್ಲಿ ಅರಂತೋಡಿನ ಯುವಕ ಜಗದೀಶ್ ಅಡಿಗರ ವಿಜಯಿಯಾಗಿದ್ದಾರೆ.















ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ರೂ. 5000 ಘೋಷಣೆ ಮಾಡಲಾಗಿತ್ತು.
ಚೆನ್ನಕೇಶವ ದೇವಸ್ಥಾನದ ಎದುರಿನಲ್ಲಿ ಸ್ಪರ್ಧೆಯು
ಇಂದು ಬೆಳಗ್ಗೆಯಿಂದ ಆರಂಭಗೊಂಡು ಮಧ್ಯಾಹ್ನದ ತನಕ ನಡೆದು ಹಲವಾರು ಮಂದಿ ಸ್ಪರ್ಧಿಗಳು ಪ್ರಯತ್ನಿಸಿ ವಿಫಲರಾಗಿದ್ದು,ಜಗದೀಶ್ ರವರು ಸತತ 2 ತಾಸುಗಳಿಂದ ಪ್ರಯತ್ನಿಸಿ ಎಣ್ಣೆ ಕಂಬ ಏರುವ ಮೂಲಕ ಮಡಕೆ ಒಡೆದು ಬಹುಮಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.










