ಅಪಾರ ನಷ್ಟ
















ಭಾರೀ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು, ಪಕ್ಕದಲ್ಲಿದ್ದ ದನದ ಹಟ್ಟಿ ಹಾಗೂ ಕೊಟ್ಟಿಗೆಗೆ ಹಾನಿ ಸಂಭವಿಸಿದ ಘಟನೆ ಎಡಮಂಗದಲ್ಲಿ ವರದಿಯಾಗಿದೆ.
ಎಡಮಂಗಲ ಗ್ರಾಮದ ನಡುಮನೆ ಗುಡ್ಡಪ್ಪರವರ ಮನೆಗೆ ಹಾಗೂ ಪಕ್ಕದಲ್ಲಿದ್ದ ಪ್ರಭಾಕರ ನಡುಮನೆಯವರ ದನದ ಹಟ್ಟಿ ಹಾಗೂ ಕೊಟ್ಟಿಗೆಗೆ ಮರ ಮುರಿದು ಬಿದ್ದಿದ್ದು, ತೋಟದಲ್ಲಿ ಅಡಿಕೆ ಮರಗಳು ಗಾಳಿಗೆ ಮುರಿದು ಬಿದ್ದಿದೆ. ಸುಮಾರು ನಾಲ್ಕು ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಎಡಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು, ಸಂಬಂಧಪಟ್ಟ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.












