ಪಂಜ ಗ್ರಾಮ ಪಂಚಾಯತ್ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ

0

ಪಂಜ ಗ್ರಾಮ ಪಂಚಾಯತ್ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಆ.19 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾಮಧ ಅಭಿವೃದ್ಧಿ ಕುರಿತು ಬೇಡಿಕೆಗಳು ಮತ್ತು ಚರ್ಚೆಗಳು ನಡೆಯಿತು.

ನೋಡೆಲ್ ಅಧಿಕಾರಿಯಾಗಿ ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಪಾಲ್ಗೊಂಡಿದ್ದರು.ಕಾಡು ಕೋಣ ಹಾವಳಿ, ಮಂಗಗಳ ಹಾವಳಿ, ಕಾಡು ಹಂದಿ ಹಾವಳಿ, ಪೊಳೆಂಜ-ಪಾಂಡಿಗದ್ದೆ ರಸ್ತೆ ದುರಸ್ತಿ ಗೊಳಿಸುವಂತೆ, ಪಂಚಾಯತ್ ಹಿಂಬದಿ ರಸ್ತೆ ದುರಸ್ತಿ ಗೊಳಿಸುವಂತೆ,ಗುಂಡಡ್ಕ ಕಡೆ ರಸ್ತೆ ನಿರ್ಮಿಸುವಂತೆ, ಕಾಲು ದಾರಿ,ಅಪಾಯದ ಮರಗಳ ತೆರವು, ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ, ಹೈಸ್ಕೂಲ್ ಗೆ ಕೊಠಡಿ ಬೇಕು, ಅಪರಿಚಿತರಿಂದ ಮನೆ ಮನೆ ವ್ಯಾಪಾರದಿಂದ ತೊಂದರೆ, ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳ ಪ್ರಚಾರ ಮಾಡ ಬೇಕು, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಕ್ಷಣ ಡಾಕ್ಟರ್ ನೇಮಕ ಮಾಡಿ, ಪಂಜ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವಂತೆ ಮೊದಲಾದ ವಿಷಯಗಳ ಕುರಿತು ಚರ್ಚೆಗಳು ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಸಭಾಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ಸದಸ್ಯರಾದ ಶ್ರೀಮತಿ ಪೂರ್ಣಿಮಾ ದೇರಾಜೆ, ಶ್ರೀಮತಿ ನೇತ್ರಾವತಿ ಕಲ್ಲಾಜೆ, ಶ್ರೀಮತಿ ವೀಣಾ, ಲಕ್ಷ್ಮಣ ಗೌಡ ಬೊಳ್ಳಾಜೆ, ಶ್ರೀಮತಿ ದಿವ್ಯಾ ಪುಂಡಿಮನೆ , ಜಗದೀಶ್ ಪುರಿಯ, ಶ್ರೀಮತಿ ಪ್ರಮೀಳ ಸಂಪ, ಶ್ರೀಮತಿ ಮಲ್ಲಿಕಾ ಅಳ್ಪೆ,ಚಂದ್ರಶೇಖರ ದೇರಾಜೆ, ಶರತ್ ಕುದ್ವ, ಲಿಖಿತ್ ಪಲ್ಲೋಡಿ , ಕಾರ್ಯದರ್ಶಿ ಸೀತಾರಾಮ ಎಸ್,ವಿವಿಧ ಇಲಾಖೆಗಳ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ ಸ್ವಾಗತಿಸಿದರು. ಕಾರ್ಯದರ್ಶಿ ಸೀತಾರಾಮ ಎಸ್ ಜುಮಾ ಖರ್ಚು ವರದಿ ವಾಚಿಸಿದರು.