ಆ. 23 : ನಾಗಪಟ್ಟಣ ಸೇತುವೆಯ ಬಳಿ ಮತ್ಸ್ಯಗಳಿಗೆ ನೈವೇದ್ಯ ಸಮರ್ಪಿಸುವ ಕಾರ್ಯಕ್ರಮ

0


ದಿನಾಂಕ 23.08.2025ನೇ ಶನಿವಾರ ಬೆಳಿಗ್ಗೆ 10ಗಂಟೆಗೆ ಮತ್ಸ್ಯಗಳಿಗೆ ನೈವೇದ್ಯ ಸಮರ್ಪಿಸುವ ಕಾರ್ಯಕ್ರಮವಿದೆ. ಬೆಳಿಗ್ಗೆ 9.30ಕ್ಕೆ ಶ್ರೀ ಪನ್ನೆಬೀಡು ನಾಲ್ಕು ಸ್ಥಾನ ಚಾವಡಿಯಲ್ಲಿ ಪ್ರಾರ್ಥನೆ ಮಾಡಿ ಅನುವಂಶಿಕ ಮೊಕ್ತೇಸರರು, ಬಲ್ಲಾಳರ ಪ್ರತಿನಿಧಿ ಹಾಗೂ ಭಕ್ತಾದಿಗಳೊಂದಿಗೆ ನಾಗಪಟ್ಟಣ ಸೇತುವೆಯ ಬಳಿ ಕಲ್ಲಿನಲ್ಲಿ ಪೂಜಾ ಕಾರ್ಯಕ್ರಮ ಜರಗಿ, ಪ್ರಾರ್ಥನೆಯನ್ನು ಮಾಡಿ ಮತ್ಸಗಳಿಗೆ ನೈವೇದ್ಯ ಅರ್ಪಿಸುವ ಪುಣ್ಯ ಕಾರ್ಯಕ್ರಮ ಜರುಗಲಿದೆ.
ಸೀಮೆ ದೇವಸ್ಥಾನ ತೊಡಿಕಾನ ಮಲ್ಲಿಕಾರ್ಜುನ ಸ್ವಾಮಿಯ ದೇವಳದ ಮೀನುಗಳು ಆ ದಿನ ಇಲ್ಲಿ ಬಂದು ನೈವೇದ್ಯ ಸ್ವೀಕರಿಸಿಸುತ್ತವೆ ಎಂದು ಪ್ರತೀತಿ ಇದೆ.

ಈ ದೇವಕಾರ್ಯದಲ್ಲಿ ಭಾಗವಹಿಸಬೇಕೆಂದು ಬೂಡು ರಾಧಾಕೃಷ್ಣ ರೈ
ತಿಳಿಸಿದ್ದಾರೆ.