ಬಳ್ಪ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಯುವಕ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ

0

ವಿಕ್ರಮ ಯುವಕ ಮಂಡಲ ಬಳ್ಪ ಮತ್ತು ಶ್ರೀ ಧರ್ಮಶಾಸ್ತವೂ ಭಜನಾ ಮಂಡಳಿ ಬಳ್ಪ ಇವುಗಳ ಸಂಯುಕ್ತ ಆಶ್ರಯದಲ್ಲಿ 21ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ, ಯುವಕ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಗೌರವಾರ್ಪಣೆ ಯುವಕ ಮಂಡಲದ ವಠಾರದಲ್ಲಿ ಆ. 17ರಂದು ನಡೆಯಿತು.

ಕಾರ್ಯಕ್ರಮದ ಉಧ್ಟಾಟನೆಯನ್ನು ನಿವೃತ್ತ ಯೋಧರಾದ ವಿಘ್ನೋಧರ ಆಲ್ಕಬೆ ನೆರವೇರಿಸಿ ಶುಭ ಹಾರೈಸಿದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಯುವಕ ಮಂಡಲದ ಪೂರ್ವಾಧ್ಯಕ್ಷ ಪ್ರಸನ್ನ ವೈ.ಟಿ. ಪ್ರತಿಜ್ಞಾ ವಿಧಿ ಬೋಧಿಸಿದರು.

ವೇದಿಕೆಯಲ್ಲಿ ಬಳ್ಪ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಉಮೇಶ್ ಪೂಜಾರಿ ಬುಡೆಂಗಿ, ಶಾಲಾ ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಕುಸುಮಾಧರ ಕೋಡಿಬೈಲು, ಅಧ್ಯಕ್ಷ ಸುರೇಶ್ ಆಲ್ಕಬೆ, ಕಾರ್ಯದರ್ಶಿ ಯತೀಶ್ ಕಟ್ಟೆಮನೆ, ಭಜನಾ ಮಂಡಳಿಯ ಮಿಥುನ್ ರಾಜ್ ಜತ್ತಿಲ, ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಶೈಲಜಾ ಎಣ್ಣೆಮಜಲು, ಶ್ರೀಮತಿ ನೇತ್ರಾವತಿ ಹೊಪ್ಪಾಳೆ ಹಾಗೂ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಶಶಿಧರ ಎಣ್ಣೆಮಜಲು ಉಪಸ್ಥಿತಿತರಿದ್ದರು. ಅಷ್ಠಮಿ ಆಚರಣೆ ಪ್ರಯುಕ್ತ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ, ಸಾರ್ವಜನಿಕರಿಗೆ ಮೊಸರು ಕುಡಿಕೆ ಹಾಗೂ ಇನ್ನಿತರ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಸಂಜೆ ಸಮಾರೋಪ, ಬಹುಮಾನ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಕೆ.ಎಸ್.ಆರ್.ಪಿ ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎ.ಎಸ್.ಐ ಸೀತಾರಾಮ ಪೂಜಾರಿ ಪಡ್ಕಿಲಾಯರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಯಾದ ಮೆಸ್ಕಾಂ ಗುತ್ತಿಗಾರು ಶಾಖೆಯ ಸಹಾಯಕ ಅಭಿಯಂತರರಾದ ಲೋಕೇಶ್ ಎಣ್ಣೆಮಜಲು ಶುಭ ಹಾರೈಸಿದರು. ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷ ಸುರೇಶ್ ಆಲ್ಕಬೆ, ಪೂರ್ವಾಧ್ಯಕ್ಷರುಗಳಾದ ರಮಾನಂದ ಎಣ್ಣೆಮಜಲು, ಜಯರಾಮ ಆಲ್ಕಬೆ, ಭಾಸ್ಕರ ಕೊರಪ್ಪಣೆ, ಶಿವಕುಮಾರ್ ಎಣ್ಣೆಮಜಲು, ಶಶಿಧರ ಎಣ್ಣೆಮಜಲು ಉಪಸ್ಥಿತರಿದ್ದರು‌. ಕು. ಭವಿಕಾ ಕುಳ ಪ್ರಾರ್ಥಿಸಿ ಗಗನ್ ಕಟ್ಟೆಮನೆ ಸ್ವಾಗತಿಸಿದರು. ಯತೀಶ್ ಕಟ್ಟೆಮನೆ ವಂದಿಸಿದರು. ರಜನೀಶ್ ಕುಳ ಕಾರ್ಯಕ್ರಮ ನಿರೂಪಿಸಿದರು.