ಮಡಿಕೇರಿ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಕಳ್ಳತನ: ಕಳ್ಳರ ಪತ್ತೆ ಗಾಗಿ ಸುಳ್ಯ ತಾಲೂಕಿನಾದ್ಯಂತ ಹುಡುಕಾಟ ನಡೆಸಿದ್ದ ಪೊಲೀಸರು

0

ಕೆರೆಯಲ್ಲಿ ಸಿಕ್ಕ ಅನಾಥ ಬೈಕಿನ ಜಾಡ ಹಿಡಿದು ಖದೀಮರನ್ನು ಮಧ್ಯಪ್ರದೇಶ ದಿಂದ ಬಂಧಿಸಿ ತಂದ ಮಡಿಕೇರಿ ಪೊಲೀಸರು

ಕಳೆದ ಜೂನ್ ತಿಂಗಳ 17 ರಂದು ಮಧ್ಯ ರಾತ್ರಿ 2 ಗಂಟೆ ಗೆ ಮಡಿಕೇರಿ ರೈಫಲ್ ರೇಂಜ್ ಪೊಲೀಸ್ ಕ್ವಾಟರ್ಸ್ ನಲ್ಲಿ 8 ಕ್ವಾಟ್ರಸ್ ಗಳಿಗೆ ನುಗ್ಗಿದ್ದ ಕಳ್ಳರು ಐದುವರೆ ಗ್ರಾಂ ಚಿನ್ನ ಹಾಗೂ 95 ಸಾವಿರ ರೂ ನಗದು ದರೋಡೆ ಗೈದು ಪರಾರಿಯಾಗಿ ತಲೆ ಮರೆಸಿಕ್ಕೊಂಡು ಪೊಲೀಸರಿಗೆ ಸವಾಲಾಗಿ ಮಾರ್ಪಟ್ಟಿದ್ದರು.

ಇದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಪೊಲೀಸರು ಸುಳ್ಯ ತಾಲೂಕಿನಾದ್ಯಂತ ಕಲ್ಲುಗುಂಡಿ, ಸಂಪಾಜೆ, ಗುತ್ತಿಗಾರು, ಸುಳ್ಯ ನಗರ ಮುಂತಾದ ಕಡೆ ಈ ಕಳ್ಳರ ಪತ್ತೆಗಾಗಿ ಶೋಧಕಾರ್ಯ ಹಾಗೂ ಸಿ ಸಿ ಟಿ ವಿ ದೃಶ್ಯ ಸಂಗ್ರಹ ನಡೆಸಿದ್ದರು.

ಇದೀಗ ಪ್ರಕರಣ ತಲೆಮೆರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ಪೊಲೀಸರು ಮಧ್ಯಪ್ರದೇಶದ ಧಾರ್ ಜಿಲ್ಲೆಯಿಂದ ಪತ್ತೆ ಹಚ್ಚಿ ಬಂಧಿಸಿ ತರುವಲ್ಲಿ ಯಶಸ್ವಿಯಾಗಿದ್ದು ಇದಕ್ಕೆ ಸಂಭಂದಿಸಿ ಮತ್ತಿಬ್ಬರು ಆರೋಪಿಗಳು ತಲೆ ಮರೆಸಿ ಕ್ಕೊಂಡಿದ್ದು ಅವರ ಹುಡುಕಾಟವು ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳು ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಾರವಲ್ಲಿ ಗ್ರಾಮದ 23 ವರ್ಷದ ಸುರೇಶ್ ಸಿಂಗಾಲ್ ಹಾಗೂ ಮಾಲ್ಪುರ ಗ್ರಾಮದ 24 ವರ್ಷದ ಮನೀಶ್ ಬಂಗೇಲ್ ಎಂಬ ವರಾಗಿದ್ದಾರೆ.

ಪೊಲೀಸರು ಈ ಬಗ್ಗೆ ಮೊದಲು ಹುಡುಕಾಟ ಆರಂಭಿಸಿದಾಗ ಮಡಿಕೇರಿ ಮತ್ತು ಸುತ್ತಮುತ್ತದ ಭಾಗದಲ್ಲಿ ಸಿ ಸಿ ಟಿ ವಿಯಲ್ಲಿ ಒಂದು ಬೈಕ್ ಮೂಲಕ ಮೂವರು ಅಪರಿಚಿತರು ಸಂಚರಿಸುವ ದೃಶ್ಯ ಕಂಡು ಬಂದಿತ್ತು. ಅಲ್ಲದೆ ಮಾರನೇ ದಿನ ಸೋಮವಾರಪೇಟೆ ಯಲ್ಲೂ ಒಂದು ಮನೆ ಕಳ್ಳ ತನ ಆಗಿತ್ತು. ಆದರೆ ಅಲ್ಲಿ ಇವರು ಬೈಕ್ ಮೂಲಕ ಹೋಗಿದ್ದ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ.

ಆದರೆ ಅದೇ ಸಮಯದಲ್ಲಿ ಮಡಿಕೇರಿಯ ಮಕ್ಕಂದೂರಿನ ಕಾಂಡನಕೊಲ್ಲಿ ಎಂಬಲ್ಲಿ ಕೆರೆಯೊಂದರಲ್ಲಿ ಅನಾಥವಾಗಿ ಒಂದು ಬೈಕ್ ಪೊಲೀಸರಿಗೆ ಸಿಕ್ಕಿದ್ದು ಇದರ ಜಾಡು ಹಿಡಿದ ಪೊಲೀಸರು ನಟೋರಿಯಸ್ ಕಳ್ಳರನ್ನು ಮಧ್ಯಪ್ರದೇಶದ ಧಾರ್ ಜಿಲ್ಲೆ ಯಿಂದ ಬಂಧಿಸುವವರೆಗೆ ಕಾರ್ಯಚರಣೆ ನಡೆಸಿ ಯಶಸ್ವಿ ಯಾಗಿದ್ದಾರೆ.

ಕಳ್ಳರು ಮೂಲತಹ ಮಧ್ಯಪ್ರದೇಶ ಭಾಗದ ನಟೋರಿಯಸ್ ಗ್ಯಾಂಗಿನ ಸದಸ್ಯರುಗಳಾಗಿದ್ದು ತೆಲಂಗಾಣ,ತಮಿಳುನಾಡು, ಕರ್ನಾಟಕ ಮುಂತಾದ ಕಡೆಗಳಲ್ಲಿ ಇವರ ಮೇಲೆ ಸುಮಾರು ನೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಪೊಲೀಸ್ ಕ್ವಾರ್ಟರ್ಸ್ ನಲ್ಲಿಯೇ ಮನೆಗಳಿಗೆ ನುಗ್ಗಿ ಕಳವು ಮಾಡಿದ್ದ ಆರೋಪಿಗಳ ಪತ್ತೆಗಾಗಿ ಸುಮಾರು 5 ಕ್ಕೂ ಹೆಚ್ಚು ತಂಡಗಳನ್ನು ರಚಿಸಿದ ಕೊಡಗು ಜಿಲ್ಲಾ ಪೊಲೀಸರು ತಾಲೂಕು ಮಾತ್ರವಲ್ಲದೆ ಜಿಲ್ಲೆ,ರಾಜ್ಯ, ಹೊರ ರಾಜ್ಯ ಮುಂತಾದ ಕಡೆಗಳಲ್ಲಿ ಇವರ ಪತ್ತೆಗಾಗಿ ಶೋಧಕಾರ್ಯವನ್ನು ನಡೆಸುತ್ತಿದ್ದರು.

ಕಳ್ಳತನ ಮಾಡಿದ ಸಂದರ್ಭದಲ್ಲಿ ಕಳ್ಳತನ ವಾಗಿದ್ದ ಒಂದು ಮನೆಯಲ್ಲಿ ಜಿಗಣೆ ಕಚ್ಚಿದ್ದ ರಕ್ತದ ಮಾದರಿ ದೊರಕಿದ್ದು ಆ ಸಂದರ್ಭದಲ್ಲಿ ಅದನ್ನು ಪರೀಕ್ಷೆಗಾಗಿ ಕಳುಹಿಸಿದ್ದರು. ಇದೀಗ ಓರ್ವ ಕಳ್ಳನ ರಕ್ತದ ಮಾದರಿ ಇದಕ್ಕೆ ಸರಿ ಬಂದಿರುವುದು ಕೂಡ ತಿಳಿದು ಬಂದಿದೆ.

ಈ ಕಾರ್ಯಚರಣೆಯಲ್ಲಿ ಎಸ್ ಪಿ ಅವರ ನೇತ್ರದಲ್ಲಿ ಆಡಿಷನಲ್ ಎಸ್ ಪಿ ದಿನೇಶ್, ಡಿ ವೈ ಎಸ್ ಪಿ ಸೂರಜ್, ಸೋಮವಾರ ಪೇಟೆ ಡಿ ವೈ ಎಸ್ ಪಿ ಚಂದ್ರ ಶೇಖರ್,ಇನ್ಸ್ಪೆಕ್ಟರ್ ಗಳಾದ ಮಹದೇವ್,ಕೃಷ್ಣರಾಜ್, ಡಿ ಎಸ್ ಪಿ ಇನ್ಸ್ಪೆಕ್ಟರ್ ಮೇದಪ್ಪ ನೇತ್ರದಲ್ಲಿ ಯೋಗೇಶ್,ನಿರಂಜನ್, ಭರತ್, ಪ್ರವೀಣ್, ಕುಶಾಲನಗರ ರೂರಲ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್,ಎಸ್ ಐ ಮಂಜುನಾಥ್,ಮಡಿಕೇರಿ ಟೌನ್ ಇನ್ಸ್ಪೆಕ್ಟರ್ ರಾಜು, ಬೈಕನ್ನು ಪತ್ತೆ ಹಚ್ಚಿದ ಗ್ರಾಮಾಂತರ ಇನ್ಸ್ಪೆಕ್ಟರ್ ಚಂದ್ರಶೇಖರ್ ತೊಡಗಿದ ಇನ್ನೂ ಅನೇಕ ಮಂದಿ ಜಿಲ್ಲೆ ಮತ್ತು ಹೊರ ರಾಜ್ಯದ ಅಧಿಕಾರಿ ಗಳಿಗೂ,ಪೊಲೀಸ್ ಸಿಬ್ಬಂದಿಗಳನ್ನು ಹಿರಿಯ ಅಧಿಕಾರಿ ಎಸ್ ಪಿ ಕೆ ರಾಮರಾಜಾನ್ ಅವರು ಶ್ಲಾಘಿಸಿದ್ದಾರೆ.