ತೌಹೀದ್ ಎಜುಕೇಶನಲ್ ಹಾಗೂ ಕಲ್ಚರಲ್ ಟ್ರಸ್ಟ್ ಸಂಪಾಜೆ ಇದರ ಅಧಿನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದ್ರಸತುಲ್ ಇಸ್ಲಾಹ್ ಮದ್ರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮ ಆಗಸ್ಟ್ 19ರಂದು ಸಂಜೆ 5.30 ರಿಂದ ಮಸ್ಜಿದ್ ಅಲ್ ಇಸ್ಲಾಹ್ ಸಲಫಿ ಮಸೀದಿ ಸಂಪಾಜೆ ವಠಾರದಲ್ಲಿ ನಡೆಯಿತು.
ಶಾಝಿಲ್ ರವರ ಕಿರಾಹತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮದ್ರಸ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.
ಪೋಷಕರಿಗೆ ಹಾಗೂ ಮಸೀದಿ ಸದಸ್ಯರಿಗೆ ಇಸ್ಲಾಮಿಕ್ ರಸಪ್ರಶ್ನೆಗಳನ್ನು ನಡೆಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಸಿದ ಕ್ವಿಜ್ ನಲ್ಲಿ ರಬೀಹ್ 7ನೇ ತರಗತಿ ಪ್ರಥಮ, ಆನಿಯ 5ನೇ ತರಗತಿ ದ್ವಿತೀಯ ಸ್ಥಾನ ಪಡೆದರು.















ಚಿತ್ರಕಲಾ ಸ್ಪರ್ಧೆಯಲ್ಲಿ ಶಜ್ವಾ 2ನೇ ತರಗತಿ ಪ್ರಥಮ ಅಮಾನ್ 2ನೇ ತರಗತಿ ದ್ವಿತೀಯ ಸ್ಥಾನ ಪಡೆದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಉಡುಗೊರೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಕೋಶಧಿಕಾರಿ ಸಿರಾಜ್ ಮೈಲಿಕಲ್, ಹಿರಿಯರಾದ ಅಬ್ಬಾಸ್ ಕೊಯನಾಡು, ಶರೀಫ್ ಸಂಪಾಜೆ, ಜಾಫರ್ ಎಸ್ ಎಂ ಕೆ ಕೊಯನಾಡು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು
ಮಸೀದಿ ಖತೀಬರು ಹಾಗೂ ಮದ್ರಸ ಮುದರ್ರಿಸಾರಾದ ಮೌಲವಿ ಶಮೀರ್ ಮೆಹಬೂಬ್ ಕೊಡಗು ಎಲ್ಲಾರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು
ಮಸೀದಿ ಪರಿಪಾಲನ ಸಮಿತಿ ಜತೆ ಕಾರ್ಯದರ್ಶಿ ಫಾರೂಕ್ ಕಾನಕ್ಕೋಡ್ ವಂದಿಸಿದರು










