ಹಿಂದೂವಿನ ಮನೆಯ ಸದಸ್ಯಸಂಘಟನೆಯಲ್ಲಿರುವುದಕ್ಕೆ ಸುಳ್ಯದ ಆಡು ಮಾತಿಗೆ ಮೌಲ್ಯವಿದೆ- ಸೂಲಿಬೆಲೆ ಶ್ಲಾಘನೆ
12ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆ-ಉಪನ್ಯಾಸ
ಹಿಂದೂ ಸಮಾಜವನ್ನು ಸಂಘಟಿಸುವ ಸಲುವಾಗಿ ಸ್ಥಾಪಿಸಿದ ಸಂಘಟನೆಗೆ 60 ದಾಟಿದೆ. ಹೊಸ ಪೀಳಿಗೆಯ ಸತ್ವ ಇದಕ್ಕೆ ಜೋಡಿಸುವ ಅವಶ್ಯಕತೆ ಇದೆ. ಜಗತಿನಲ್ಲಿರುವ ಎಲ್ಲಾ ಧರ್ಮದವರಿಗೆ ಬೇರೆ ದೇಶ ಸಿಗಬಹುದು. ಹಿಂದುಗಳಿಗೆ ಭಾರತ ದೇಶ ಒಂದೇ ಇರುವುದು. ಇದೀಗ ಕಾಲ ಸನ್ನಿಹಿತವಾಗಿದೆ ಸದೃಢ ಭಾರತ ನಿರ್ಮಾಣ ಮಾಡಲು ಸೂಕ್ತ ಸಮಯ ಬಂದಿದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಯವರು ಹೇಳಿದರು.

ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃ ಶಕ್ತಿ, ದುರ್ಗಾ ವಾಹಿನಿ ಸುಳ್ಯ ಪ್ರಖಂಡಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗ ದಲ್ಲಿ ಆ.19 ರಂದು ನಡೆದ 12 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಕೇವಲ ನಾಲ್ಕು ದಿನಗಳಲ್ಲಿ ಆಪರೇಷನ್ ಸಿಂಧೂರ ಯುದ್ಧವನ್ನು ಮುಗಿಸಿ ಪಾಕಿಸ್ತಾನವನ್ನು ಭಾರತಕ್ಕೆ ಶರಣಾಗುವಂತೆ ಮಾಡಿರುವುದಲ್ಲದೆ ಅಮೇರಿಕಕ್ಕೂ ಸಡ್ಡು ಹೊಡೆಯುವ ಎತ್ತರಕ್ಕೆ ಪ್ರಧಾನಿ ಮೋದಿಯವರು ದೇಶವನ್ನು ಬೆಳೆಸಿದ್ದಾರೆ. ಧರ್ಮಸ್ಥಳದಂತ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಮಾವೋವಾದಿಗಳು ಷಡ್ಯಂತ್ರ ಹೆಣೆದು ಜಿಹಾದಿಗಳ ಮೂಲಕ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಇಂತಹ ಷಡ್ಯಂತ್ರ ಗಳನ್ನು ಅರ್ಥ ಮಾಡಿಕೊಂಡು ಸೆಟೆದು ನಿಲ್ಲ ಬೇಕಾದ ತಾರುಣ್ಯಇಂದು ಮೊಬೈಲ್ ಲೋಕದಲ್ಲಿ ಮುಳುಗಿ ಹೋಗುತ್ತಿರುವುದು ಅಪಾಯಕಾರಿ ಮುನ್ಸೂಚನೆ ಯಾಗಿದೆ. ಧರ್ಮ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ತರುಣರಿಗೆ ಹಿಂದೂ ಸಮಾಜವು ರಕ್ಷಕರಾಗಿ ನಿಂತು ಬೆಂಬಲ ನೀಡಿ ಶಕ್ತಿ ತುಂಬುವ ಕೆಲಸ ವಾಗಬೇಕು. ಭಾರತ ದೇಶ ಇನ್ನಿತರ ದೇಶಗಳ ಮಧ್ಯಸ್ಥಿಕೆ ವಹಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಭಾರತದ ತಾಕತ್ತು ಏನು ಎಂಬುದು ಮಾನವರಿಕೆಯಾಗಿದೆ. ಸುಳ್ಯದಂತಹ ಪ್ರದೇಶದಲ್ಲಿರುವ ಪ್ರತಿ ಹಿಂದೂವಿನ ಮನೆಯಲ್ಲಿರುವ ಸದಸ್ಯರ ಪೈಕಿ ಓರ್ವನಾದರೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆ ಎನಿಸಿಸಿಕೊಂಡಿದೆ. ಇಲ್ಲಿ ಪ್ರಸ್ತುತ ಪಡಿಸುವ ಎಲ್ಲ ವಿಚಾರಗಳಿಗೆ ಮೌಲ್ಯವಿದೆ. ವಿಶ್ವ ಹಿಂದೂ ಪರಿಷದ್ ಸಂಘಟನೆ ಹೆಸರಿನಲ್ಲಿ ಶ್ರೀ ಕೃಷ್ಣನು ಧರೆಗೆ ಬಂದಿರುವುದು ಎಂಬುದನ್ನು ಅರ್ಥೈಸಿಕೊಂಡು ಜಾತಿ ಪಂಥಗಳ ಭೇದ ಮರೆತು ಎಲ್ಲರು ಒಟ್ಟಾಗಿ ವಿಶ್ವ ಹಿಂದುತ್ವದ ಸಮಾಜ ನಿರ್ಮಾಣಕ್ಕೆಮುಂದಾಗಬೇಕು ಎಂದು ಕರೆ ನೀಡಿದರು.
















ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕರಾದ ಚಂದ್ರಶೇಖರ ತಳೂರು ದೀಪ ಪ್ರಜ್ವಲಿಸಿದರು.
ವೇದಿಕೆಯಲ್ಲಿ ಮಂಗಳೂರು ವಿಭಾಗದ ವಿ. ಹೆಚ್.ಪಿ ಸಹಕಾರ್ಯದರ್ಶಿ ಶಿವಾನಂದ ಮೆಂಡನ್, ಪುತ್ತೂರು ಜಿಲ್ಲೆ ವಿ.ಹೆಚ್. ಪಿ ಸಹ ಕಾರ್ಯದರ್ಶಿ ಪ್ರಮೋದ್ ಕಡಬ, ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್, ಪೂರ್ವಾಧ್ಯಕ್ಷ ಸೋಮಶೇಖರ ಪೖಕ, ದೈವ ನರ್ತಕ ಸರಸಿಂಗ ಪರವ, ಮೊಸರು ಕುಡಿಕೆ ಉತ್ಸವ ಸಮಿತಿ ಗೌರವಾಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಉಪಾಧ್ಯಕ್ಷ ಹರಿಪ್ರಸಾದ್ ಸುಲಾಯ, ಬಜರಂಗದಳ ಸಂಚಾಲಕ ಹರಿಪ್ರಸಾದ್ ಎಲಿಮಲೆ, ಸತ್ಸಂಗ ಪ್ರಮುಖ ಸತೀಶ್ ಟಿ. ಎನ್, ಕೋಶಾಧಿಕಾರಿ ನವೀನ್ ಎಲಿಮಲೆ, ಮಾತೃ ಶಕ್ತಿ ಸಂಯೋಜಕಿ ಶ್ರೀಮತಿ ರೀನಾ ಚಂದ್ರಶೇಖರ, ದುರ್ಗವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ, ಉಪಸ್ಥಿತರಿದ್ದರು.
ಓಂಕಾರ ತಾರಕ ಮಂತ್ರದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. 13 ಬಾರಿ ಶ್ರೀ ರಾಮ ಮಂತ್ರವನ್ನು ಸಾಮೂಹಿಕವಾಗಿ ಪಠಿಸಲಾಯಿತು.ಶ್ರೀಮತಿ ಸವಿತ
ಸುಂತೋಡು ಪ್ರಾರ್ಥಿಸಿದರು. ಬಜರಂಗದಳ ಸುಳ್ಯ ಪ್ರಖಂಡದ ಸಂಯೋಜಕ ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿದರು. ವಿ.ಹೆಚ್.ಪಿ.ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್ ರವರು ಸಂಘಟನೆಗಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರ ಹಿಂದೆ ರಕ್ಷಣೆಗಾಗಿ ಹಿಂದೂ ಸಮಾಜ ನಿಲ್ಲುವಂತಾಗಬೇಕು ಎಂದು ಪ್ರಾಸ್ತಾವಿಕವಾಗಿ
ಮಾತನಾಡಿದರು.
ಕು. ವೖಷ್ಣವಿ ರಾವ್ ವೖಯಕ್ತಿಕ ಗೀತೆ ಪ್ರಸ್ತುತ ಪಡಿಸಿದರು. ನವೀನ್ ಎಲಿಮಲೆ ವಂದಿಸಿದರು. ವಿಶಾಖ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾ ಪ್ರಮುಖ ವರ್ಷಿತ್ ಚೊಕ್ಕಾಡಿ, ಪ್ರಕಾಶ್ ಮೇನಾಲ, ಉಪೇಂದ್ರ ಕಾಮತ್ ಹಾಗೂ ಸಂಘಟನೆ ಯ ಪದಾಧಿಕಾರಿಗಳು ಸಹಕರಿಸಿದರು.










