ಸುಳ್ಯ ಮೊಸರು ಕುಡಿಕೆ ಉತ್ಸವದ ಅಟ್ಟಿ ಮಡಕೆ ಒಡೆಯುವ ಸ್ಪರ್ಧೆಯ ಫಲಿತಾಂಶ

0

ರೆಂಜಾಳ- ಪ್ರಥಮ, ಮುಳ್ಯ ಅಟ್ಲೂರು- ದ್ವಿತೀಯ, ಹೆಚ್. ಟಿ. ಎಂ. ಸಿ. ಸುಳ್ಯ ತೃತೀಯ

ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನೆ ದಿನಾಚರಣೆ ಅಂಗವಾಗಿ ಆ. 19 ರಂದು ನಡೆದ 12 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಟ್ಟಿ ಮಡಿಕೆ
ಒಡೆಯುವ ಸ್ಪರ್ಧೆಯ ಶೋಭಾಯಾತ್ರೆಯು ರಾತ್ರಿ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸಮಾಪನಗೊಂಡಿತು.

ಬಳಿಕ ಬಹುಮಾನ ವಿತರಣಾ ಸಮಾರಂಭವು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್ ರವರ ಅದ್ಯಕ್ಷತೆಯಲ್ಲಿ ನಡೆಯಿತು.

ಪ್ರಥಮ ಬಹುಮಾನ ರೂ. 15025/- ಮತ್ತು ಶಾಶ್ವತ ಫಲಕ ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ, ದ್ವಿತೀಯ ಬಹುಮಾನ ರೂ. 10,025/- ಮತ್ತು ಶಾಶ್ವತ ಫಲಕ ಯುವ ಕೇಸರಿ ಬಳಗ ಮುಳ್ಯ ಅಟ್ಲುರು ಹಾಗೂ ತೃತೀಯ ಬಹುಮಾನ ರೂ. 7025/- ಮತ್ತು ಶಾಶ್ವತ ಫಲಕ ಹೆಚ್ ಟಿ ಎಂ ಸಿ ಸುಳ್ಯ ಪಡೆದುಕೊಂಡಿತು.

ಸ್ಪರ್ಧೆಯಲ್ಲಿ ವಿ. ಎಹೆಚ್. ಪಿ ಕರಿಕೆ, ಯುವಶಕ್ತಿ ದಾಸರಬೈಲು, ಟೀಮ್ ಛತ್ರಪತಿ ಕಡಬ, ಓಂ ಫ್ರೆಂಡ್ಸ್ ಅಜ್ಜಾವರ, ವೀರ ಸಾವರ್ಕರ್ ಆರಂಬೂರು, ಟೀಮ್ ಕಪಿಲ ಚಾರ್ವಕ,ಟೀಮ್ ವೀರ ಸಾವರ್ಕರ್ ಸುಳ್ಯ, ಅನ್ನಪೂರ್ಣ ಪವರ್ ಬಾಯ್ಸ್ ಸುಳ್ಯ ತಂಡಗಳು ಭಾಗವಹಿಸಿದ್ದವು.
ಎಲ್ಲಾ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಿಅಭಿನಂದಿಸಲಾಯಿತು.
ವೇದಿಕೆಯಲ್ಲಿ ವಿ ಎಚ್ ಪಿ ಅಧ್ಯಕ್ಷ ಶ್ರೀಕಾಂತ್ ಗೋಳ್ವಾ ಲ್ಕರ್, ಬಜರಂಗದಳ ಸಂಯೋಜಿಕ ಹರಿಪ್ರಸಾದ್ ಎಲಿಮಲೆ,ಗೌರವಾಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್ ಪೆರು ಮುಂಡ, ಉಪಾಧ್ಯಕ್ಷರಾದ ಹರಿಪ್ರಸಾದ್ ಸುಲಾಯ, ಸೋಮಶೇಖರ್ ಪೈಕ, ನವೀನ್ ಎಲಿಮಲೆ, ವರ್ಷಿತ್ ಚೊಕ್ಕಾಡಿ, ಮಾತೃಶಕ್ತಿ ಸಂಯೋಜಿಕಿ ರೀನಾ ಚಂದ್ರಶೇಖರ, ದುರ್ಗಾ ವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ ಉಪಸ್ಥಿತರಿದ್ದರು.
ತೀರ್ಥೆಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.