ಇಂದು ನಡೆದ ಮತ ಎಣಿಕೆ : ಕಾಂಗ್ರೆಸ್ – 8, ಬಿಜೆಪಿ -5
ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಕಡಬ ಪಟ್ಟಣ ಪಂಚಾಯತ್ ರಚನೆಗೊಂಡ ಬಳಿಕ ನಡೆದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರದ ಗದ್ದುಗೆ ಪಡೆಯಲು ಯಶಸ್ವಿಯಾಗಿದೆ.
ಕಡಬ ಪಟ್ಟಣ ಪಂಚಾಯತ್ ನ 13 ವಾರ್ಡ್ ಗಳಿಗೆ ಆ.17 ರಂದು ಚುನಾವಣೆ ನಡೆದಿತ್ತು. ಇಂದು (ಆ.20) ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಂಡಿತು. ಜಿದ್ದಾ ಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ 8 ಸ್ಥಾನದಲ್ಲಿ ವಿಜಯಶಾಲಿಯಾಗಿದ್ದು, ಬಿಜೆಪಿ 5 ಸ್ಥಾನಗಳಲ್ಲಿ ಜಯ ಗಳಿಸಿದೆ.
ವಿಜೇತರ ವಿವರ ಇಂತಿದೆ
ವಾರ್ಡ್ 1-ಕಳಾರ
ಹಿಂದುಳಿದ ವರ್ಗ ಎ’ ಮಹಿಳೆಗೆ ಮೀಸಲಾದ ಕಳಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ತಮನ್ನಾ ಜಬೀನ್ 201 ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರೇಮಾ ಒಂದೂ ಮತ ಪಡೆಯದೆ ಶೂನ್ಯ ಸಂಪಾದನೆ ಮಾಡಿದ್ದಾರೆ. ಎಸ್.ಡಿ.ಪಿ.ಐ. ಅಭ್ಯರ್ಥಿ ಸಮೀರಾ ಹಾರಿಸ್ 74, ಪಕ್ಷೇತರ ಅಭ್ಯರ್ಥಿ ಜೈನಾಬಿ 139 ಮತಗಳನ್ನು ಪಡೆದಿದ್ದಾರೆ.
ವಾರ್ಡ್ 2- ಕೋಡಿಬೈಲು:
ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾದ ಕೋಡಿಬೈಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕುಸುಮ ಅಂಗಡಿಮನೆ 187 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೋಹಿನಿ 177 ಮತ ಪಡೆದಿದ್ದಾರೆ. 4 ನೋಟಾ ಮತಗಳು ಬಿದ್ದಿವೆ.
ವಾರ್ಡ್ 3-ಪನ್ಯ
ಸಾಮಾನ್ಯ ಅಭ್ಯರ್ಥಿಗೆ ಮೀಸಲಾದ ಪನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಹಮ್ಮದ್ ಫೈಝಲ್ 320 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯ ಆದಂ ಕುಂಡೋಳಿ 75, ಎಸ್.ಡಿ.ಪಿ.ಐ.ಯ ಹಾರಿಸ್ ಕಳಾರ 6, ಮುಸ್ಲಿಂ ಲೀಗ್ ನ ಕೆ. ಅಬ್ದುಲ್ ರಝಾಕ್ 2 ಮತಗಳನ್ನು ಪಡೆದಿದ್ದಾರೆ.
ವಾರ್ಡ್ 4-ಬೆದ್ರಾಜೆ
ಸಾಮಾನ್ಯ ಮೀಸಲು ಬೆದ್ರಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸೈಮನ್ ಸಿ.ಜೆ. 232 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯ ಅಶೋಕ್ ಕುಮಾರ್ ಪಿ. 168 ಮತಗಳನ್ನು ಪಡೆದಿದ್ದಾರೆ.
ವಾರ್ಡ್ 5-ಮಾಲೇಶ್ವರ
ಹಿಂದುಳಿದ ವರ್ಗ ‘ಎ’ಗೆ ಮೀಸಲಾದ ಮಾಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹನೀಫ್ ಕೆ.ಎಂ. 297 ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯ ಪ್ರಕಾಶ್ ಎನ್.ಕೆ. 213 ಮತ ಪಡೆದಿದ್ದಾರೆ.















ವಾರ್ಡ್ 6-ಕಡಬ
ಸಾಮಾನ್ಯ ಮಹಿಳೆಗೆ ಮೀಸಲಾದ ಕಡಬ ನಗರ ವಾರ್ಡಿನಿಂದ ಕಾಂಗ್ರೆಸ್‌ನ ಶ್ರೀಮತಿ ನೀಲಾವತಿ ಶಿವರಾಮ್ 314 ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರೇಮಾ 176 ಮತ, ಪಕ್ಷೇತರರಾದ ಆಲೀಸ್ ಚಾಕೊ 16, ಎಸ್‌ಡಿಪಿಐ ಯ ಸ್ವಾಲಿಯತ್ ಜಸೀರಾ 78 ಮತ ಪಡೆದಿದ್ದಾರೆ.
ವಾರ್ಡ್ 7-ಪಣೆಮಜಲು
ಹಿಂದುಳಿದ ವರ್ಗ ‘ ಬಿ ’ ಗೆ ಮೀಸಲಾದ ಪಣೆಮಜಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರೋಹಿತ್ ಗೌಡ 333 ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯ ಗಣೇಶ್ ಗೌಡ 248 ಮತ ಪಡೆದಿದ್ದಾರೆ.
ವಾರ್ಡ್ 8-ಪಿಜಕ್ಕಳ
ಸಾಮಾನ್ಯ ಕ್ಷೇತ್ರವಾದ ಪಿಜಕ್ಕಳ ದಲ್ಲಿ ಬಿಜೆಪಿಯ ದಯಾನಂದ ಗೌಡ ಪಿ. 386 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶ್ರಫ್ ಶೇಡಿಗುಂಡಿ 184 ಮತಗಳನ್ನು ಪಡೆದಿದ್ದಾರೆ.
ವಾರ್ಡ್ 9-ಮೂರಾಜೆ
ಹಿಂದುಳಿದ ವರ್ಗ ‘ಎ’ ಗೆ ಮೀಸಲಾದ ಮೂರಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೃಷ್ಣಪ್ಪ ಪೂಜಾರಿಯವರು 263 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯ ಕುಂಞಣ್ಣ ಕುದ್ರಡ್ಕ 235 ಮತ ಪಡೆದಿದ್ದು, 5 ನೋಟಾ ಮತಗಳು ಬಿದ್ದಿವೆ.
ವಾರ್ಡ್ 10-ದೊಡ್ಡಕೊಪ್ಪ
ಸಾಮಾನ್ಯ ಮಹಿಳೆಗೆ ಮಿಸಲಾದ ದೊಡ್ಡಕೊಪ್ಪ ಕ್ಷೇತ್ರದಲ್ಲಿ ಬಿಜೆಪಿಯ ಶ್ರೀಮತಿ ಗುಣವತಿ ರಘುರಾಮ 393 ಮತ ಪಡೆದು ವಿಜಯಿಯಾಗಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿ ತುಳಸಿ ಅವರಿಗೆ 258 ಮತ ಹಾಗೂ ನೋಟಾಕ್ಕೆ 9 ಮತ ಲಭಿಸಿದೆ.
ವಾರ್ಡ್ 11-ಕೋಡಿಂಬಾಳ
ಸಾಮಾನ್ಯ ಮಹಿಳೆಗೆ ಮೀಸಲಾದ ಕೋಡಿಂಬಾಳ ಕ್ಷೇತ್ರದಲ್ಲಿ ಬಿಜೆಪಿಯ ಶ್ರೀಮತಿ ಅಕ್ಷತಾ ಬಾಲಕೃಷ್ಣ ಗೌಡ 265 ಮತ ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಜ್ಯೋತಿ ಡಿ.ಕೋಲ್ಪೆ 255 ಮತ ಪಡೆದಿದ್ದಾರೆ.
ವಾರ್ಡ್ 12-ಮಜ್ಜಾರು
ಪರಿಶಿಷ್ಠ ಜಾತಿ ಅಭ್ಯರ್ಥಿಗೆ ಮೀಸಲಾದ ಮಜ್ಜಾರು ಕ್ಷೇತ್ರದಲ್ಲಿ ಬಿಜೆಪಿಯಿಂದ ಮೋಹನ 306 ಮತ ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮಡ್ಯಡ್ಕ 238 ಮತ ಪಡೆದಿದ್ದಾರೆ. 2 ನೋಟಾ ಮತಗಳು ಬಿದ್ದಿವೆ.
ವಾರ್ಡ್ 13-ಪುಳಿಕುಕ್ಕು
ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಪುಳಿಕುಕ್ಕು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೃಷ್ಣ ನಾಯ್ಕ 315 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ, ಬಿಜೆಪಿಯಿಂದ ಸದಾನಂದ ನಾಯ್ಕ ಅವರು ಸ್ಪರ್ಧಿಸಿ 264 ಮತ ಪಡೆದಿದ್ದಾರೆ.










