ಐನೆಕಿದು ಹಾಲು ಸೊಸೈಟಿ ಹಾಗೂ ಅಂಗಡಿಯಿಂದ ಆ.17 ರ ರಾತ್ರಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರದ ಸತೀಶ್ ಎಂಬವರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.















ಈ ಸಂಬಂಧ ಸುಮಾರು 6500ಹಣ ಕಳ್ಳತನವಾಗಿದ್ದು ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರದ ಸತೀಶ್ (40) ಎಂಬಾತನನ್ನು ದಸ್ತ ಗಿರಿ ಮಾಡಲಾಗಿದ್ದು ಒಟ್ಟು -3057 ರೂಪಾಯಿ ಹಣವನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ಸುಬ್ರಹ್ಮಣ್ಯ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.










