ನಾವೂರು : ರಸ್ತೆ ಬದಿಯ ಚರಂಡಿಯಲ್ಲಿ ಕಟ್ಟಿ ನಿಂತಿರುವ ಕೊಳಚೆ ನೀರು

0

ಪರಿಸರದಲ್ಲಿ ಹೆಚ್ಚಾದ ಗಬ್ಬು ವಾಸನೆ

ಸುಳ್ಯದ ನಾವೂರು ಚಿತ್ರಮಂದಿರದ ರಸ್ತೆಯ ಕೆಳ ಭಾಗದಲ್ಲಿ ಮುನೀರ್ ಎಂಬುವವರ ಮನೆಯ ಮುಂದೆ ರಸ್ತೆಯ ಬದಿಯಲ್ಲಿರುವ ಚರಂಡಿಯಲ್ಲಿ ಕೊಳಚೆ ನೀರು ತುಂಬಿ ನಿಂತಿದ್ದು ಪರಿಸರ ಗಬ್ಬು ವಾಸನೆಯಿಂದ ಕೂಡಿದೆ.

ಕಳೆದ ಹಲವಾರು ಸಮಯಗಳಿಂದ ಈ ಪರಿಸ್ಥಿತಿ ನಿರ್ಮಾಣ ವಾಗಿದ್ದು ಈ ಬಗ್ಗೆ ಸಂಬಂಧಪಟ್ಟ ನಗರ ಪಂಚಾಯತಿಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ಸಮಸ್ಯೆಯನ್ನು ಹೇಳಿ ಕ್ಕೊಂಡರೂ ಯಾವುದೇ ಪ್ರಯೋಜನ ಬರುತ್ತಿಲ್ಲ ಎಂದು ಈ ಭಾಗದ ನಿವಾಸಿಗಳು ತಮ್ಮ ಅಹವಾಲುಗಳನ್ನು ಸುದ್ದಿಗೆ ತಿಳಿಸಿದ್ದಾರೆ.

ಸೊಳ್ಳೆಗಳ ಕಾಟದಿಂದ ಸ್ಥಳೀಯ ಪರಿಸರದ ಜನತೆಗೆ ಸಾಂಕ್ರಮಿಕ ರೋಗಗಳು ಬರುವ ಸಾಧ್ಯತೆಗಳು ಇದ್ದು ಕೂಡಲೇ ನಗರ ಪಂಚಾಯತ್ ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈ ಗೊಳ್ಳಬೇಕಾಗಿದೆ.