ಕುಕ್ಕಂದೂರು : ಆನೆ ದಾಳಿ, ಕೃಷಿ ನಾಶ

0


ಜಾಲ್ಸೂರು ಗ್ರಾಮದ ಕುಕ್ಕಂದೂರು ಸಿಆರ್‌ಸಿ ಕ್ವಾಂಟ್ರಸ್ ಬಳಿ ಇರುವ ಸತ್ಯಶಾಂತಿ ತ್ಯಾಗಮೂರ್ತಿ ಎಂಬವರ ತೋಟಕ್ಕೆ ನಿನ್ನೆ ರಾತ್ರಿ ಕಾಡಾನೆ ದಾಳಿ ನಡೆಸಿದೆ.
ಸುಮಾರು ಬಾಳೆಗಿಡ, ಅಡಿಕೆ ಹಾಗೂ ಕರಿಮೆಣಸಿನ ಗಿಡವನ್ನು ಹಾನಿ ಮಾಡಿದ್ದು ಅಪಾರ ನಷ್ಟವಾಗಿದೆ.
ಹಾಗೂ ಹತ್ತಿರವಿರುವ ನೆಕ್ರಾಜೆ ದೇವಿಪ್ರಸಾದ್‌ರವರ ತೋಟಕ್ಕು ಆನೆ ನುಗ್ಗಿ ಕೃಷಿ ನಾಶ ಪಡಿಸಿದ್ದು, ಅರಣ್ಯ ಇಲಾಖೆಯವರು ಈ ಕಡೆ ಗಮನ ಹರಿಸಬೇಕಾಗಿದೆ.