ಕ್ರೀಡಾಕ್ಷೇತ್ರದ ಸಾಧನೆಗಾಗಿ ಸೀಮಂತ್ ಡಿ.ಹೆಚ್ ಗೆ ಗೌರವಾರ್ಪಣೆ
ಸುಳ್ಯದ ಯುವಜನ ಸಂಯುಕ್ತ ಮಂಡಳಿ ಆಶ್ರಯದಲ್ಲಿ ಕುಟುಂಬ ಸಂಗಮ ಕಾರ್ಯಕ್ರಮ ಆ.20ರಂದು ಸಂಜೆ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.
ಮಂಡಳಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕರ ಅಧ್ಯಕ್ಷತೆಯಲ್ಲಿ, ದೀಪಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
















ಉದ್ಘಾಟನೆ ಸಂದರ್ಭದಲ್ಲಿ ನಿರ್ದೇಶಕ ದಿನೇಶ್ ಹಾಲೆಮಜಲು ಹಾಗೂ ಹೇಮಲತಾ ದಂಪತಿಯ ಪುತ್ರ, ಕಳೆದ ಸಾಲಿನಲ್ಲಿ ನಡೆದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಎಲ್ಲಾ ವಿಭಾಗಗಳನ್ನು ಪ್ರತಿನಿಧಿಸಿ ಪ್ರಥಮ ಸ್ಥಾನಿಯಾದ ಗುತ್ತಿಗಾರು ಸರಕಾರಿ ಮಾದರಿ ಪಿಎಂಶ್ರೀ ಶಾಲೆಯ 7ನೇ ತರಗತಿಯ ಆಂಗ್ಲ ಮಾಧ್ಯಮ ವಿದ್ಯಾರ್ಥಿ ಸೀಮಂತ್ ಡಿ.ಹೆಚ್ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ
ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಯುವಜನ ಸೇವಾ ಸಂಸ್ಥೆ ಅಧ್ಯಕ್ಷರಾದ ದೀಪಕ್ ಕುತ್ತಮೊಟ್ಟೆ, ಮಂಡಳಿಯ ಪೂರ್ವಾಧ್ಯಕ್ಷರುಗಳಾದ ದಿಲೀಪ್ ಬಾಬ್ಲುಬೆಟ್ಟು, ಚಂದ್ರಶೇಖರ ಪನ್ನೆ, ತೇಜಸ್ವಿ ಕಡಪಳ, ಮನಮೋಹನ ಪುತ್ತಿಲ, ಶಿವಪ್ರಕಾಶ್ ಕಡಪಳ,
ಮಂಡಳಿ ಪ್ರಧಾನ ಕಾರ್ಯದರ್ಶಿ ನಮಿತಾ ಹರ್ಲಡ್ಕ, ಕೋಶಾಧಿಕಾರಿ ಸಂಜಯ ನೆಟ್ಟಾರು, ಕಾರ್ಯಕ್ರಮದ ಉಸ್ತುವಾರಿ ನಿರ್ದೇಶಕರುಗಳಾದ ವಿನುತಾ ಪಾತಿಕಲ್ಲು ಹಾಗೂ ಲೋಹಿತ್ ಬಾಳಿಕಳ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರು, ಅವರ ಕುಟುಂಬದವರು ಉಪಸ್ಥಿತರಿದ್ದರು.

ನಿರೂಪಕರೂ ಹಾಗೂ ಗಾಯಕರಾದ ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಡೆಸಿಕೊಟ್ಟರು. ಮಂಡಳಿಯ ಕುಟುಂಬ ಸದಸ್ಯರ ಮಕ್ಕಳು ಹಾಗೂ ಮನೆಯವರಿಂದ ನೃತ್ಯ, ಗಾಯನ ನಡೆಯಿತು. ವಿವಿಧ ಮನೋರಂಜನಾ ಆಟಗಳನ್ನು ಆಡಿಸಿ, ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಅದೃಷ್ಟ ಕುಟುಂಬವಾಗಿ ಲೋಹಿತ್ ಬಾಳಿಕಳ ಕುಟುಂಬ ಆಯ್ಕೆಯಾಗಿದ್ದು ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಆಗಮಿಸಿದ ಎಲ್ಲ ಕುಟುಂಬಗಳಿಗೆ ಒಂದರಂತೆ ಗಿಡಗಳನ್ನು ನೆನಪಿನ ಕಾಣಿಕೆಯಾಗಿ ವಿತರಿಸಲಾಯಿತು. ಸಹಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.










