ಅರಂತೋಡಿನ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿಗೆ ಸ್ಟೀಲ್ ಅಲ್ಮೆರಾ ಕೊಡುಗೆ

0

ಅರಂತೋಡಿನ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿಗೆ ದಿ.ರಾಘವ ಆಚಾರ್ ಅಡ್ಕಾರುರವರ ಸ್ಮರಣಾರ್ಥ ಅವರ ಪತ್ನಿ ಶ್ರೀಮತಿ ಸಾವಿತ್ರಿ ಆರ್ ಆಚಾರ್ ಹಾಗೂ ಮಕ್ಕಳು ಸ್ಟೀಲ್ ಅಲ್ಮೆರಾ ವನ್ನು ಕೊಡುಗೆಯಾಗಿ ನೀಡಿದ್ದು, ಅದನ್ನು ಅವರು ಆ. 20ರಂದು ಅವರು ಕಾಲೇಜಿಗೆ ಹತ್ತಾಂತರಿಸಿದರು.

ಸಂಸ್ಥೆಯ ಸಂಚಾಲಕರಾದ ಕೆ.ಆರ್ ಗಂಗಾಧರ್ ವರು ದಿ ll ರಾಘವ ಆಚಾರ್ ರವರ ಕುರಿತು ಮಾತನಾಡಿ, ಶಿಕ್ಷಣ ಸಂಸ್ಥೆಯ ಆರಂಭದ ದಿನಗಳಲ್ಲಿ ತನ್ನ ಇಬ್ಬರೂ ಸಹೋದರರ ಜೊತೆಗೆ ಆರಂತೋಡಿಗೆ ಬಂದು ನೆಲೆಸಿ ಶಾಲಾ ಕಟ್ಟಡದ ಹೆಂಚಿನ ಚಾವಣಿ ಮತ್ತು ಬೆಂಚು ಡೆಸ್ಕು ಬಾಗಿಲು -ಕಿಟಕಿ ಮೊದಲಾದ ಎಲ್ಲಾ ರೀತಿಯ ಬಡಗಿ ಕೆಲಸವನ್ನು ನಿರ್ವಹಿಸಿದ್ದರು. ಶಾಲೆಯ ಬೆಳವಣಿಗೆಯೊಂದಿಗೆ ಆಡಳಿತ ಮಂಡಳಿಯ ಜೊತೆಗೆ ಕೈಜೋಡಿಸಿ ಕುಟುಂಬ ಸದಸ್ಯರಂತೆ ಸಹಕರಿಸಿದವರು ಹಾಗೂ ಹೈಸ್ಕೂಲು ವಿಭಾಗದಲ್ಲಿ ಸ್ಟಾಫ್ ಗ್ಯಾಪ್ ಅವಧಿಯಲ್ಲಿ ತಮ್ಮ ಪುತ್ರಿ ರೇಖಾ ಅವರನ್ನು ಗೌರವ ಶಿಕ್ಷಕಿಯಾಗಿ ಸೇವೆಗೆ ಕಳುಹಿಸಿದ್ದರು ಎಂದು ನೆನಪು ಮಾಡಿಕೊಂಡರು.

ಶ್ರೀಮತಿ ಸಾವಿತ್ರಿಯವರು ಸಂಚಾಲಕರಿಗೆ ಅಲ್ಮೆರಾ ದ ಕೀಲಿಗೈ ಹಸ್ತಾಂತರಿಸಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕ ಪಿ ಸೋಮಶೇಖರ್, ಶಿಕ್ಷಕ ಕಿಶೋರ್ ಕುಮಾರ್, ಉಪನ್ಯಾಸಕ ಮೋಹನ ಚಂದ್ರ, ಶ್ರೀಮತಿ ರೇಖಾ ಬಿ ಆಚಾರ್ ಬೈಕಾಡಿ , ಭರತ್ ರಾಜ್ ಬೈಕಾಡಿ, ರಾಘವ ರವರ ಮಕ್ಕಳಾದ ಕೆ.ಆರ್ ಸತೀಶ್ ಆಚಾರ್ಯ ಅಡ್ಕಾರು, ಕೆ.ಆರ್ ಶಿವಪ್ರಸಾದ್ ಆಚಾರ್ ಹಾಗೂ ರಾಘವರವರ ಸಹೋದರ ಧನಂಜಯರವರು ಉಪಸ್ಥಿತರಿದ್ದರು.

ಶಾಲಾ ವತಿಯಿಂದ ಕೊಡುಗೆ ನೀಡಿದ ಸಾವಿತ್ರಿ ಆಚಾರ್ ರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.