ನೆಟ್ಟಾರು :23ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ

0


ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ವತಿಯಿಂದ 23ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ನೆಟ್ಟಾರಿನಲ್ಲಿ ನಡೆಯಿತು. ಬೆಳಿಗ್ಗೆ ಅಂಗನವಾಡಿ ಪುಟಾಣಿಗಳಿಗೆ ಮತ್ತು ಶಾಲಾ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ನಡೆಯಿತು.

ನಂತರ ಮಕ್ಕಳು, ಯುವಕ ಯುವತಿಯರಿಗೆ ಪ್ರತ್ಯೇಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸಂಜೆ ಅಕ್ಷಯ ಯುವಕ ಮಂಡಲದ ಅಧ್ಯಕ್ಷರಾದ ಭಾಸ್ಕರ ನೆಟ್ಟಾರು ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್ ರೈ ಮಾತನಾಡಿ ಯುವಕ ಮಂಡಲವು ಸಾಮಾಜಿಕ, ಶೈಕ್ಷಣಿಕ ಚಟುವಟಿಕೆ ಜೊತೆಯಲ್ಲಿ ನಮ್ಮ ಧಾರ್ಮಿಕ ನಂಬಿಕೆ ಉಳಿಸಿ ಬೆಳೆಸುವ ಕೆಲಸವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯಂತಹ ಕಾರ್ಯಕ್ರಮವನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಈ ಬಾರಿ ನಡೆಯುವ ನಿಮ್ಮ ಬೆಳ್ಳಿ ಹಬ್ಬದ ಕಾರ್ಯಕ್ರಮಕ್ಕೆ ಪಂಚಾಯತ್ ಆಡಳಿತ ಸಂಪೂರ್ಣ ಸಹಾಯ ನೀಡುತ್ತೇವೆ ಎಂದರು.

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಆರ್ ಕೆ ಭಟ್ ಕುರುಂಬುಡೇಲು ಮಾತನಾಡಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಿದಾಗ ಯಶಸ್ಸು ಸಾಧ್ಯವಿದೆ. ಭಗವದ್ಗೀತೆಯ ಸಂದೇಶವು ಇದೇ ಆಗಿದೆ. ಅಕ್ಷಯ ಯುವಕ ಮಂಡಲ ಮತ್ತು ಅಕ್ಷತಾ ಮಹಿಳಾ ಮಂಡಲದ ಈ ನಿಟ್ಟಿನಲ್ಲಿ ಕೆಲಸ ಮಾಡುವ ತಂಡ, ಆದ್ದರಿಂದ ಮೊಸರು ಕುಡಿಕೆಯಂತಹ ಕಾರ್ಯಕ್ರಮ ಅರ್ಥಪೂರ್ಣವಾದುದು ಹೇಳಿ ಶುಭ ಹಾರೈಸಿದರು.ಯುವಕ ಮಂಡಲವು ಬೆಳ್ಳಿ ಹಬ್ಬ, ಸುವರ್ಣ ಮಹೋತ್ಸವ ಹಾಗೂ ಶತಮಾನೋತ್ಸವ ಆಚರಿಸುವಂತಾಗಲಿ ಎಂದರು. ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ ಮೊಸರು ಕುಡಿಕೆ ಉತ್ಸವ ಬಹಳ ಯಶಸ್ವಿಯಾಗಿ ನಡೆದಿದೆ ಇದಕ್ಕೆ ಕಾರಣ ನಿಮ್ಮಲ್ಲಿರುವ ಒಗ್ಗಟ್ಟಿನ ಶಕ್ತಿ. ಸಂಘಟನೆ ಗಟ್ಟಿ ಇದ್ದರೆ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಅದೇ ರೀತಿ ಮುನ್ನಡೆಸುವ ನಾಯಕ ಸಹ ಹಾಗೆ ಇರಬೇಕು. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಅಕ್ಷಯ ಯುವಕ ಮಂಡಲಕ್ಕೆ ಇವೆಲ್ಲವೂ ಇದೆ. ಕಾರ್ಯಕ್ರಮಕ್ಕೆ ನಮ್ಮ ಸಹಕಾರವು ಇದೆ ಎಂದು ಹೇಳುತ್ತಾ ಶುಭ ಹಾರೈಸಿದರು.ನೆಟ್ಟಾರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ನೆಟ್ಟಾರು ಮಾತನಾಡಿ ನೆಟ್ಟಾರು ಶಾಲೆಗೆ ಯುವಕ ಮಂಡಲದ ಕೊಡುಗೆ ಹಲವು ಇದೆ. ನಿತ್ಯ ನಿರಂತರ ಕಾರ್ಯಕ್ರಮಗಳ ಮೂಲಕ ಸದಾ ಚಟುವಟಿಕೆಯಲ್ಲಿರುವ ಯುವಕ ಮಂಡಲಕ್ಕೆ ಬೆಳ್ಳಿ ಹಬ್ಬದ ಸಂಭ್ರಮ ನಾವೆಲ್ಲರೂ ಈ ಕಾರ್ಯಕ್ರಮ ಯಶಸ್ವಿಗೊಳ್ಳುವಲ್ಲಿ ಸರ್ವ ಸಹಕಾರ ನೀಡೋಣ ಎಂದರು. ನಂತರ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು.ವಿಜೇತರ ಹೆಸರನ್ನು ಯುವಕ ಮಂಡಲದ ಕೋಶಾಧಿಕಾರಿ ಚಂದ್ರಶೇಖರ ಮೊಗಪ್ಪೆ ಓದಿದರು. ಸ್ಥಾಪಕಧ್ಯಕ್ಷರಾದ ದೇವದಾಸ್ ನೆಟ್ಟಾರು ಹಾಗೂ ಅಕ್ಷತಾ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ವೇದಿಕೆಯಲ್ಲಿದ್ದರು. ಯುವಕ ಮಂಡಲದ ಕಾರ್ಯದರ್ಶಿ ಶೈಲೇಶ್ ನೆಟ್ಟಾರು ಸ್ವಾಗತಿಸಿ, ಅಧ್ಯಕ್ಷ ಭಾಸ್ಕರ ನೆಟ್ಟಾರು ಧನ್ಯವಾದವಿತ್ತರು. ಸದಸ್ಯರಾದ ಪ್ರವೀಣ್ ಚಾವಡಿಬಾಗಿಲು ಕಾರ್ಯಕ್ರಮ ನಿರೂಪಿಸಿದರು.