ಮಿತ್ರವೃಂದ ಪೈಲಾರು ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 39 ನೇ ವರ್ಷದ ಮೊಸರು ಕುಡಿಕೆ ಉತ್ಸವ ಪೈಲಾರು ವಠಾರದಲ್ಲಿ ಆ. 17 ರಂದು ನಡೆಯಿತು.
ಬೆಳಗ್ಗೆ ಶ್ರೀ ರಾಮ ಭಜನಾ ಮಂಡಳಿ ಪೈಲಾರು ಇದರ ಸದಸ್ಯರಿಂದ ಹಾಗೂ ಸ್ಥಳೀಯ ಭಜಕರಿಂದ ಭಜನಾ ಕಾರ್ಯಕ್ರಮ ನೇರವೇರಿತು.
ಹಿರಿಯರಾದ ಲಿಂಗಪ್ಪ ಗೌಡ ಗುಡ್ಡೆಮನೆಯವರು ದೀಪ ಬೆಳಗಿಸಿ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿದರು.
ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
















ಸಂಜೆ ಸಮಾರೋಪ ಸಮಾರಂಭವು ಮಿತ್ರ ವೃಂದ ಪೈಲಾರು ಇದರ ಅಧ್ಯಕ್ಷ ಶಶಿಕಾಂತ್ ಮಿತ್ತೂರು ರವರ ಅದ್ಯಕ್ಷತೆಯಲ್ಲಿ ನಡೆಯಿತು.
ಕಾಂಚಿ ಕಾಮಕೋಟಿ ವೇದ ಪಾಠಶಾಲೆಯ ಅಧ್ಯಾಪಕರಾದ ವೇದಮೂರ್ತಿ ವೆಂಕಟೇಶ ಶಾಸ್ತ್ರಿಗಳು ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಸ. ಹಿ. ಪ್ರಾ ಶಾಲೆ ಪೈಲಾರು ಇದರ ಶಾಲಾಭಿವೃದ್ಧಿ ಮತ್ತು ಮೇಲುಸ್ತವಾರಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಲತಾ ಉರುಂಬಿ,ಉದ್ಯಮಿ ಮಧುಕಿರಣ್ ಪೂಜಾರಿಕೋಡಿ ಉಪಸ್ಥಿತರಿದ್ದರು. ವಿಜೇತ ಸ್ಪರ್ಧೆಗಳಿಗೆ ಬಹುಮಾನ ನೀಡಲಾಯಿತು.
ಚರಿಷ್ಮ ಕಡಪಳ ಪ್ರಾರ್ಥಿ ಸಿದರು. ಕೋಶಾಧಿಕಾರಿ ಹರ್ಷಿತ್ ದಾತಡ್ಕ ಸ್ವಾಗತಿಸಿ, ಕಾರ್ಯದರ್ಶಿ ಧನ್ಯರಾಜ್ ಮೂಕಮಲೆ ವರದಿ ವಾಚಿ ಸಿದರು, ವಿವೇಕ್ ಪಡ್ಪು ವಂದಿಸಿದರು. ತೀರ್ಥೇಶ್ ಯಾದವ್ ನಾರ್ಣಕಜೆ ಕಾರ್ಯಕ್ರಮ ನಿರೂಪಿಸಿದರು.










