ಮಂಡೆಕೋಲು ಗ್ರಾ.ಪಂ. ಸಾಮಾನ್ಯ ಸಭೆ
ಮಂಡೆಕೋಲು ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಆ.21ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ನಾರಾಯಣ ಕೆದ್ಕಾರ್, ನವೀನ್ ಮುರೂರು, ಅನಿಲ್ ತೋಟಪ್ಪಾಡಿ, ವಿನುತಾ ಪಾತಿಕಲ್ಲು, ದಿವ್ಯಲತಾ ಚೌಟಾಜೆ, ತಿಲಕ ಕುತ್ಯಾಡಿ, ಉಷಾ ಗಂಗಾಧರ್, ಶಶಿಕಲಾ, ಗೀತಾ ಮೈಲೆಟ್ಟಿಪಾರೆ, ರಾಧಿಕ ಮೈತಡ್ಕ, ಪ್ರಶಾಂತಿ ಭಾಗವಹಿಸಿದ್ದರು. ಪಿಡಿಒ ರಮೇಶ್ ಕಾರ್ಯಕಲಾಪ ನಡೆಸಿ ಕೊಟ್ಟರು.















ಪೇರಾಲಿನಲ್ಲಿ ಹಾಗೂ ಬಾಯಿಕೋಡಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಬೇಡಿಕೆ ಬಂದಿರುವುದರಿಂದ ಸರಕಾರಿ ಸ್ಥಳ ಗುರುತಿಸಲು ಕಂದಾಯ ಇಲಾಖೆಗೆ ಬರೆಯಲು ಸಭೆ ನಿರ್ಣಯಿಸಿತು.
ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಸಾಕು ನಾಯಿಗಳನ್ನು ರಸ್ತೆಗಳಿಗೆ ಬಿಡಬಾರದಾಗಿ ಪ್ರಕಟಣೆ ಅಳವಡಿಸಲು ಸಭೆ ನಿರ್ಣಯಿಸಿತು. ಪಂಚಾಯತ್ ವತಿಯಿಂದ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಗೆ ಪಶುಇಲಾಖೆಗೆ ಬರೆಯಲು ನಿರ್ಣಯಿಸಲಾಗಿದೆ.
ಇರುವಂಬಳ ಶಾಲೆಯಲ್ಲಿ ಈಗಾಗಲೇ ಉದ್ಯೋಗ ಖಾತರಿ ಯೋಜನೆಯಲ್ಲಿ ಅಡುಗೆ ಶೆಡ್ ಮಾಡಲಾಗಿದ್ದು ಅದರ ಉದ್ಘಾನೆಗೆ ದಿನನಿಗದಿ ಪಡಿಸಲು ಕ್ರಮ ಕೈಗೊಳ್ಳುವುದು.










