ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಆ.19 ರಂದು ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಅನುದಾನಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರವರಿಗೆ ವಿಧಾನ ಸಭಾ ಕಲಾಪ ವೀಕ್ಷಣೆಯ ಸಂದರ್ಭದಲ್ಲಿ
ಮನವಿ ಸಲ್ಲಿಸಲಾಯಿತು.















ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಳ, ಉಪಾಧ್ಯಕ್ಷೆ ಮೋಹಿನಿ ಎಂ, ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ, ಲೋಕಯ್ಯ ನಾಯ್ಕ ಬೊಳಿಯೂರು, ಹರೀಶ್ ಎಂ, ಶ್ರೀಮತಿ ಹಾಜಿರಾ, ಶ್ರೀಮತಿ ಮೀನಾಕ್ಷಿ ಕೆ, ಪವಿತ್ರ ಕುದ್ವ, ಶ್ರೀಮತಿ ಜಯಲತಾ ಕೆ ಡಿ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್ ಉಪಸ್ಥಿತರಿದ್ದರು.










