ಮರ್ಕಂಜ: ಮಾವಜಿ, ಉಬ್ರಾಳ, ಪಾರೆಪ್ಪಾಡಿ ಭಾಗದಲ್ಲಿ ಕೃಷಿ ತೋಟಕ್ಕೆ ಒಂಟಿ ಸಲಗ ದಾಳಿ – ಅಪಾರ ಕೃಷಿ ನಷ್ಟ

0

ಮರ್ಕಂಜ ಭಾಗದ ಪಾರೆಪ್ಪಾಡಿ, ಉಬ್ರಾಳ, ಮಾವಜಿ ಭಾಗದ ಕೃಷಿ ತೋಟಕ್ಕೆ ಒಂಟಿ ಸಲಗವೊಂದು ದಾಳಿ ನಡೆಸಿ ಅಪಾರ ಪ್ರಾಮಾಣದ ಕೃಷಿ ನಷ್ಟ ಮಾಡಿದೆ.

ನಿನ್ನೆ ರಾತ್ರಿ ಪಾರೆಪ್ಪಾಡಿ ಪ್ರಶಾಂತ್ ರೈ ಪಾರೆಪ್ಪಾಡಿ, ಹಿಮಕರ ಮಾವಜಿ ಯವರ ತೋಟಕ್ಕೆ ದಾಳಿ ನಡೆಸಿ ಅಪಾರ ಪ್ರಾಮಾಣದ ಕೃಷಿ ನಾಶ ಮಾಡಿತ್ತು. ಸುಮಾರು ಒಂದು ತಿಂಗಳಿನಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಮಾವಾಜಿ ಕೇಶವ ಗೌಡ, ಸದಾಶಿವ ಗೌಡ, ಮೋನಪ್ಪ ಗೌಡ, ಪಾರ್ವತಿ, ರುಕ್ಮಿಯ್ಯ ಗೌಡ ಮಿತ್ತಪೇರಲು, ಶಶಿಧರ ಗೊಳ್ಯಾಡಿ ರಾಮೇಶ್ವರ ಹಾಗೂ ಉಬ್ರಾಳ ಭಾಗದಲ್ಲಿ ಅಪಾರ ಕೃಷಿ ನಾಶ ಮಾಡಿರುವುದಾಗಿ ತಿಳಿದು ಬಂದಿದೆ.