














ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ,ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ 54ನೇ ವರ್ಷದ ಶ್ರೀ ಗಣೇಶೋತ್ಸವ ವು ಆ.27 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 8.00 ಕ್ಕೆ ಶ್ರೀ ಗಣಪತಿ ಪ್ರತಿಷ್ಠೆ, ಪೂರ್ವಾಹ್ನ ಗಂಟೆ 9.00 ರಿಂದ ಸ್ಪರ್ಧೆಗಳು ಪ್ರಾರಂಭ, 9.30 ಕ್ಕೆ ಗಣಪತಿ ಹವನ,ಮದ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಗಂಟೆ 9.00 ಕ್ಕೆ ರಂಗಪೂಜೆ,ಮೂಡಸೇವೆ,ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 9.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ ಗಂಟೆ 5.00 ರಿಂದ ಶ್ರೀ ಜಲದುರ್ಗಾದೇವಿ ಮಕ್ಕಳ ಕುಣಿತ ಭಜನಾ ತಂಡ ಪೆರುವಾಜೆ,ಸ್ನೇಹಾಂಜಲಿ ಮಕ್ಕಳ ಕುಣಿತ ಭಜನಾ ತಂಡ ಬೆಳ್ಳಾರೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ ಗಂಟೆ 7.00 ಕ್ಕೆ ಧಾರ್ಮಿಕ ಸಭೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಬೆಳ್ಳಾರೆ ವಿರಾಟ್ ಫ್ರೆಂಡ್ಸ್ ನ ಅಧ್ಯಕ್ಷ ಸಂತೋಷ್ ಮಣಿಯಾಣಿ ಬೀಡು ಅಧ್ಯಕ್ಷತೆ ವಹಿಸಲಿದ್ದಾರೆ.
ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಪ್ರಾಧ್ಯಾಪಕ ಈಶ್ವರ ಶರ್ಮ ಪಿ.ಚಾವಡಿಬಾಗಿಲು ಇವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಅನುಪಮ ಮೆಡಿಕಲ್ ನ ಶ್ರೀಮತಿ ಮಹಾಲಕ್ಷ್ಮೀ ಎನ್.ಭಟ್ ಇವರನ್ನು ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್ ರೈ ಸೇರಿದಂತೆ ಹಲವು ಜನ ಗಣ್ಯರು ಉಪಸ್ಥಿತರಿರಲಿದ್ದಾರೆ.
ರಾತ್ರಿ ಗಂಟೆ 9.30 ರಿಂದ ಶ್ರೀ ಭಗವತಿ ಯಕ್ಷಗಾನ ಮಂಡಳಿ ಸಸಿಹಿತ್ಲು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ರೀ ಶರಣ್ ಕುಮಾರ್ ಬಜ್ಪೆ ವಿರಚಿತ ಯಕ್ಷಗಾನ ಬಯಲಾಟ – ಮಹಾಶಕ್ತಿ ಮಂತ್ರದೇವತೆ ನಡೆಯಲಿದೆ.
ಆ.28 ರಂದು ಬೆಳಿಗ್ಗೆ ಗಂಟೆ 8.00 ಕ್ಕೆ ಶ್ರೀ ಗಣಪತಿ ಅಥರ್ವಶೀರ್ಷ ಹವನ,9.00 ಕ್ಕೆ ಭಜನಾ ಕಾರ್ಯಕ್ರಮ,ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಳ್ಳಾರೆ,ಕೊಳಂಬಳ ಶ್ರೀ ರಕ್ತೇಶ್ವರಿ ಭಜನಾ ಮಂಡಳಿಯವರಿಂದ,12.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.
ಗಂಟೆ 1.00 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
1.30 ರಿಂದ ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ ,ಭಕ್ತವೃಂದ ಭಜನಾ ಮಂಡಳಿ ಬೆಳ್ಳಾರೆ ವತಿಯಿಂದ ಭಜನೆ ನಡೆಯಲಿದೆ.
ಸಾಯಂಕಾಲ 4.00 ರಿಂದ ಮಹಾಪೂಜೆ,ಮಂಗಳಾರತಿ,ಪ್ರಸಾದ ವಿತರಣೆ ನಡೆಯಲಿದೆ.
ನಂತರ ಶ್ರೀ ದೇವರ ವಿಜೃಂಭಣೆಯ ಶೋಭಾಯಾತ್ರೆ ಬೆಳ್ಳಾರೆ ಮುಖ್ಯ ಪೇಟೆಯಲ್ಲಿ ನಡೆದು ಗೌರಿಹೊಳೆಯಲ್ಲಿ ಜಲಸ್ತಂಭನ ಮಾಡಲಾಗುವುದು.










