ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಲ್ಲತಡ್ಕದಲ್ಲಿ ನಡೆಯಿತು. ಕ್ಲಬ್ಬಿನ ಅಧ್ಯಕ್ಷರಾದ ಲ. ಶ್ರೀಮತಿ ವಿಮಲಾ ರಂಗಯ್ಯ ವಹಿಸಿದ್ದರು.
ವೇದಿಕೆಯಲ್ಲಿ ಕ್ಲಬ್ಬಿನ ಸ್ಥಾಪಕ ಸ್ಥಾಪಕ ಅಧ್ಯಕ್ಷ ಹಾಗೂ ವಲಯ ೮ರ ವಲಯ ಅಧ್ಯಕ್ಷ ಪ್ರೊ, ಲ/ರಂಗಯ್ಯ ಶೆಟ್ಟಿಗಾರ್, ಲ /ರಾಮಚಂದ್ರಗೌಡ ಪಳಂಗಾಯ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ವಿಜಯದಾಸ ವಾಡ್ಯಪ್ಪನ ಮನೆ, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ, ದೇವಕಿ ಕುಶಾಲಪ್ಪ ಗೌಡ ನೆತ್ತರ, ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಶೋಭಾ ಗಿರಿಧರ ಸ್ಕಂದ ಸುಬ್ರಮಣ್ಯ, ಕ್ಲಬ್ಬಿನ ಕಾರ್ಯದರ್ಶಿ ಲ. ಗಾಯತ್ರಿ ಕೃಷ್ಣಕುಮಾರ್ ಬಾಳುಗೋಡು, ಖಜಾಂಜಿ, ಲ, ಶ್ರೀ ಮತಿ, ಭಾರತಿ ದಿನೇಶ್ ಉಪಸ್ಥಿತರಿದ್ದರು.















ಸನ್ಮಾನಿತಾ ಹಿರಿಯ ಮಾತೆಯರಾದ ಶ್ರೀಮತಿ ನಿರ್ಮಲ ಸುಬ್ಬಪ್ಪ ಸುಬ್ರಹ್ಮಣ್ಯ, ಶ್ರೀಮತಿ ಪಾರ್ವತಿ ಪುರುಷೋತ್ತಮ ಗೌಡ ಶೆಟ್ಟಿಡ್ಕ, ಶ್ರೀಮತಿ ಮೀನಾಕ್ಷಿ ರಾಮಚಂದ್ರಗೌಡ ಪಳಂಗಾಯ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕ್ಲಬ್ಬಿನ ಸದಸ್ಯರುಗಳಾದ ಲ. ಕೃಷ್ಣಕುಮಾರ್ ಬಾಳುಗೋಡು, ಲ. ವಿಷ್ಣು ಪ್ರಸಾದ್ ಪಾತಿಕಲ್ಲು, ಲ. ರೇಗನ್ ಶೆಟ್ಟಿ ಯಡ್ಕ, ಲ. ಶ್ರೀಮತಿ ಸ್ವಾತಿ ದಿನೇಶ್ ಮೊಗ್ರ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು, ಶಿಕ್ಷಕ ವೃಂದದವರು ಶಾಲಾ ಮಕ್ಕಳು ಭಾಗವಹಿಸಿದ್ದರು. . ಲ. ವಿಷ್ಣು ಪ್ರಸಾದ್ ಪಾತಿಕಲ್ಲು ಸ್ವಾಗತಿಸಿ ಲ. ಶ್ರೀಮತಿ ಗಾಯತ್ರಿ ಕೃಷ್ಣಕುಮಾರ್ ಬಾಳುಗೋಡು ವಂದಿಸಿದರು.










