ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ವತಿಯಿಂದ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ಆ. 21ರಂದು ನಡೆಯಿತು.
ಪ್ರಥಮವಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರ ಮಾತೃಶ್ರೀ ಶ್ರೀಮತಿ ಸುಶೀಲಾ ರೈಯವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಅಧ್ಯಕ್ಷ ಲ. ಯತೀಶ್ ಭಂಡಾರಿ, ಕೋಶಾಧಿಕಾರಿ, ಐಪಿಪಿ ಲ. ಉಷಾ ಬಿ. ಭಟ್ MJF, ಫಸ್ಟ್ ವೈಸ್ ಪ್ರೆಸಿಡೆಂಟ್ ಕುಂಬ್ರ ದಯಾಕರ ಆಳ್ವ, ಸೆಕೆಂಡ್ ವೈಸ್ ಪ್ರೆಸಿಡೆಂಟ್ ಚಂದ್ರಹಾಸ ರೈ ಪುಡ್ಕಜೆ, ಪದಾಧಿಕಾರಿಗಳಾದ ಹೊನ್ನಪ್ಪ ಬೆಳ್ಳಾರೆ, ಪದ್ಮನಾಭ ಶೆಟ್ಟಿ ಪೆರುವಾಜೆ, ಈಶ್ವರ ವಾರಣಾಶಿ ಮತ್ತಿತರು ಉಪಸ್ಥಿತರಿದ್ದರು.

ಪುಟ್ಟಣ್ಣ ಗೌಡ ಮೋಂಟಡ್ಕರಿಗೆ ಸನ್ಮಾನ















ಹಿರಿಯ ನಾಗರಿಕರ ನೆಲೆಯಲ್ಲಿ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಸಂಚಾಲಕರಾದ ಎಂ.ಪಿ. ಉಮೇಶರ ತಂದೆ ಮೋಂಟಡ್ಕ ಪುಟ್ಟಣ್ಣ ಗೌಡ ಮೋಂಟಡ್ಕರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಸಂಚಾಲಕರಾದ ಎಂ.ಪಿ. ಉಮೇಶ್, ಶ್ರೀಮತಿ ರಜನಿ ಉಮೇಶ್, ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಅಧ್ಯಕ್ಷ ಲ. ಯತೀಶ್ ಭಂಡಾರಿ, ಕೋಶಾಧಿಕಾರಿ ಲ. ಎಂ.ಕೆ. ಶೆಟ್ಟಿ, ಐಪಿಪಿ ಲ. ಉಷಾ ಬಿ. ಭಟ್ MJF, ಲ. ಕುಂಬ್ರ ದಯಾಕರ ಆಳ್ವ, ಲ. ಚಂದ್ರಹಾಸ ರೈ ಪುಡ್ಕಜೆ, ಲ. ಈಶ್ವರ ವಾರಣಾಶಿ ಉಪಸ್ಥಿತರಿದ್ದರು.










