ನೆಲ್ಲೂರು ಕೆಮ್ರಾಜೆ: ಕೊಡಪಾಲ ಭಾಗದ ಕೃಷಿ ತೋಟಕ್ಕೆ ಕಾಡಾನೆ ಹಿಂಡು ದಾಳಿ – ಅಪಾರ ಕೃಷಿ ನಷ್ಟ

0

ಕಾಲು ದಾರಿಯಲ್ಲಿ ಎದುರಾದ ಆನೆ

ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲ ಭಾಗದಲ್ಲಿ ಕೃಷಿ ತೋಟಕ್ಕೆ ಕಾಡಾನೆ ಹಿಂಡು ದಾಳಿ ನಡೆಸಿ ಅಪಾರ ಪ್ರಾಮಾಣದ ಕೃಷಿ ನಷ್ಟ ನಡೆಸಿದೆ.

ನಿನ್ನೆ ರಾತ್ರಿ ಕೊಡಪಾಲ ಶ್ರೀರಾಮ್ ಭಟ್, ಸುಬ್ರಹ್ಮಣ್ಯ ಭಟ್, ಸತ್ಯನಾರಾಯಣ ಭಟ್ ರವರ ತೋಟಕ್ಕೆ ದಾಳಿ ನಡೆಸಿ ಅಪಾರ ಪ್ರಾಮಾಣದ ಕೃಷಿ ನಾಶ ಮಾಡಿದೆ.

ಕಾಲು ದಾರಿಯಲ್ಲಿ ಎದುರಾದ ಆನೆ :


ನಿನ್ನೆ ರಾತ್ರಿ ಕೊಡಪಾಲದ ವ್ಯಕ್ತಿಗಳಿಬ್ಬರು ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆನೆ ಹಿಂಡು ಎದುರಾದ ಘಟನೆ ನಡೆದಿದೆ.

ಕೊಡಪಾಲ ಕೃಷ್ಣ ಮಣಿಯಾಣಿ ಮತ್ತು ಗಂಗಾಧರ ಮಣಿಯಣಿ ಯವರು ಕೇರಳಕ್ಕೆ ಹೋಗಿ ಬರುವಾಗ ರಾತ್ರಿ ಸುಮಾರು 9 ಗಂಟೆ ಆಗಿತ್ತು. ಅವರು ಕೊಡಪಾಲದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆನೆ ಮುರಿಯುವ, ಹೂಂಯ್ ಗುಡುವ ಶಬ್ದ ಕೇಳಿಸಿತು. ಅಲ್ಲಿಂದ ಅವರ ಮನೆಗೆ ಸ್ವಲ್ಪ ವೇ ದೂರವಿದ್ದ ಕಾರಣ ಮತ್ತು ಆನೆಯೋ ಅಥವಾ ಕಾಡು ಕೋಣವೋ ಎಂದು ತಿಳಿಯದ ಕಾರಣ ಅವರು ಪುನ್ಹ ಸ್ವಲ್ಪ ಹಿಂದಕ್ಕೆ ಬಂದು ಅವರ ಮನೆಗೆ ಫೋನ್ ಮಾಡಿ ಎದುರು ಬಂದಿಯಿಂದ ಲೈಟ್ ಹಾಕಿಕೊಂಡು ಬರಲು ಹೇಳಿದ್ದಾರೆ. ಆ ಸಂದರ್ಭದಲ್ಲಿ ಕಾಲು ದಾರಿಯಲ್ಲಿ ಇದ್ದ ಕಾಡನೆಗಳು ಜೋರಾಗಿ ಘೀಲಿಟ್ಟವೆಂದು ಹೀಗಾಗಿ ಅವರು ಹಿಂದಕ್ಕೆ ಹೋಗಿ ಕೃಷ್ಣ ಮತ್ತು ಗಂಗಾಧರರವರು ಸುಮಾರು 5 ಕಿ. ಮೀ. ಸುತ್ತು ಬಳಸಿ ಮನೆಗೆ ಹೋದರೆಂದು ತಿಳಿದು ಬಂದಿದೆ.