ಸುಬ್ರಹ್ಮಣ್ಯ ಗ್ರಾಮದ ಬೇಬಿ ನೂಚಿಲ ಎಂಬವರು ಆ. 20 ರ ಸಂಜೆ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಳೆದ ಒಂದು ವರ್ಷದಿಂದ ಅಸೌಖ್ಯತೆಯಿಂದ ಬಳಲುತ್ತಿದ್ದರು. ಮೃತರು ಪತಿ ಎ.ವಿ ಸುಂದರ, ಪುತ್ರ ಪದ್ಮನಾಭ, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.
ಏನೆಕಲ್ಲು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ















ಸುಬ್ರಹ್ಮಣ್ಯದ ಇಂಜಾಡಿ ಬಳಿಯ ಮುಕ್ತಿದಾಮ ಕ್ಕೆ ಬೇಬಿ ಅವರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಆ.21 ರಂದು ಕೊಂಡೊಯ್ಯಲಾಗಿತ್ತು. ಆದರೆ ಅದಾಗಲೇ ಅಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಅಂತ್ಯಸಂಸ್ಕಾರ ನಡೆಸಿದ್ದ ದೇಹವೊಂದು ಅರೆ ಬೆಂದ ಸ್ಥಿತಿಯಲ್ಲಿ ಇದ್ದ ಕಾರಣ ಬೇಬಿ ಅವರ ಅಂತ್ಯ ಸಂಸ್ಕಾರವನ್ನು ಅಲ್ಲಿ ನಡೆಸದೆ ಏನೆಕಲ್ಲು ಸ್ಮಶಾನದಲ್ಲಿ ಮಾಡಲಾಯಿತು ಎಂದು ಮೃತರ ಮನೆಯವರು ತಿಳಿಸಿದ್ದಾರೆ.










