














ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2025 ಇದರ ವತಿಯಿಂದ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ರಿಂದ ಆ.29 ತನಕ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಆ ಪ್ರಯುಕ್ತ ಆ.24.ರಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಪೂ. ಗಂ.10 ರಿಂದ ಚಿತ್ರಕಲಾ ಮತ್ತು ಕಸದಿಂದಿ ರಸ -ಸ್ಪರ್ಧೆ ,ಕೇರಂ ಮತ್ತು ಚೆನ್ನೆಮಣೆ -ಸ್ಪರ್ಧೆ ನಡೆಯಲಿದೆ. ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ
ಉದ್ಘಾಟಿಸಲಿದ್ದಾರೆ.
ಚಿತ್ರಕಲಾ ಸ್ಪರ್ಧೆ ಎಲ್ ಕೆ ಜಿ ,ಯು ಕೆ ಜಿ ಮತ್ತು 1ನೇ ತರಗತಿ -ಐಚ್ಚಿಕ, 2ರಿಂದ 4 ನೇ ತರಗತಿ ಗಣಪ,
5 ರಿಂದ 7 ನೇ ತರಗತಿ ಉತ್ಸವ, 8 ರಿಂದ 10 ನೇ ತರಗತಿ ಸಾರ್ವಜನಿಕ ಗಣೇಶೋತ್ಸವ, ಸಾರ್ವಜನಿಕರಿಗೆ ಗ್ರಾಮೀಣ ಜೀವನ ವಿಷಯದಲ್ಲಿ ನಡೆಯಲಿದೆ.
ಕಸದಿಂದ ರಸ ಸ್ಪರ್ಧೆ ಪ್ರಾಥಮಿಕ, ಪ್ರೌಢಶಾಲಾ ಮತ್ತು ಸಾರ್ವಜನಿಕ ವಿಭಾಗದಲ್ಲಿ ನಡೆಯಲಿದೆ.ಸ್ಪರ್ಧಿಗಳು ಪರಿಕಾರಗಳನ್ನು ತಂದು ಸ್ಥಳದಲ್ಲಿ ಮಾದರಿ ತಯಾರಿ.
ಮುಕ್ತ ಡಬಲ್ಸ್ ಕೇರಂ ಸ್ಪರ್ಧೆ ಸಾರ್ವಜನಿಕ , ಚೆನ್ನೆಮಣೆ ಸ್ಪರ್ಧೆ ಸಾರ್ವಜನಿಕ ನಡೆಯಲಿದೆ.ಚೆನ್ನಮಣೆ ಸ್ಪರ್ಧಿಗಳೇ ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










