














ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಯುಕ್ತಿ ಜೇನುಕೋಡಿಯವರು ಶೇ. 92 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ನೃತೋಪಾಸನ ಕಲಾ ಅಕಾಡಮಿ ಸುಬ್ರಹ್ಮಣ್ಯ ಶಾಖೆ ಇದರ ಗುರುಗಳಾದ ವಿದುಷಿ ಶಾಲಿನಿ ಆತ್ಮಭೂಷಣ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದು, ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 6ನೇ ತರಗತಿ ವಿದ್ಯಾರ್ಥಿನಿ. ಇವರು ಮೋಹಿತ್ ಜೇನುಕೋಡಿ ಮತ್ತು ಭವ್ಯಾಮೋಹಿತ್ ಜೇನುಕೋಡಿ ಏನೇಕಲ್ ಇವರ ಪುತ್ರಿ



