ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಐವರ್ನಾಡಿನ ಭೈರವೀ ನಾಟ್ಯಾಲಯದ ವಿದ್ಯಾರ್ಥಿಗಳಿಗೆ ಉತ್ತಮ ಅಂಕ

0

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ 2025 ನೇ ಸಾಲಿನ ಮೇ ತಿಂಗಳಿನಲ್ಲಿ ನಡೆದಿರುವ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಭೈರವೀ ನಾಟ್ಯಾಲಯ ಐವರ್ನಾಡು ಇದರ ಶಿಷ್ಯೆಯಂದಿರು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುತ್ತಾರೆ. ಪುರುಷೋತ್ತಮ ನೆಲಿಗದ್ದೆ ಮತ್ತು ಶ್ರೀಮತಿ ಜಯಲತರವರ ಪುತ್ರಿ ಕು. ವರ್ಷಾ ನೆಲ್ಲಿಗದ್ದೆ ಶೇ 87.25 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಇವರು ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀಮತಿ ರಾಜೇಶ್ವರಿ ನಿಡುಬೆಯವರ ಪುತ್ರಿ ಕು. ನಿಶಾ ಇವರು ಶೇ. 84.25 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಇವರು ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡಿನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀಮತಿ ರಾಜೇಶ್ವರಿ ನಿಡುಬೆ ಇವರ ಇನ್ನೋರ್ವ ಪುತ್ರಿ ಸತ್ಯಪ್ರಿಯ ಶೇ. 73.57 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಇವರು ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರೆಲ್ಲರೂ ಭೈರವೀ ನಾಟ್ಯಾಲಯದ ಶ್ರೀಮತಿ ರಕ್ಷಿತಾ ಸ್ವಸ್ತಿಕ್ ಮತ್ತು ಶೀಮತಿ ವಿದ್ಯಾ ಸರವಣ ಇವರ ಶಿಷ್ಯೆಯರಾಗಿದ್ದಾರೆ.