ಪೊಲೀಸರ ಅಣುಕು ಪ್ರದರ್ಶನಕ್ಕೆ ಬೆಚ್ಚಿ ಬಿದ್ದ ಸಾರ್ವಜನಿಕರು

ಸುಳ್ಯ ಚಿನ್ನದ ಅಂಗಡಿಗೆ ಹಾಡುಹಗಲೇ ದರೋಡೆಕೋರರು ನುಗ್ಗಿ ಬಂದೂಕು ಮತ್ತು ಇತರ ಮಾರಕ ಆಯುಧ ವನ್ನು ತೋರಿಸಿ ಹೆದರಿಸಿ ಅಂಗಡಿ ಯಲ್ಲಿದ್ದ ಚಿನ್ನಾ ಭರಣ ವನ್ನು ಲೂಟಿ ಮಾಡಿ ಪಾರಾರಿಯಾಗಿದ್ದು, ಮಾಹಿತಿ ತಿಳಿದ ಪೊಲೀಸರು ತಕ್ಷಣ ಕಳ್ಳರನ್ನು ಬೆನ್ನಟ್ಟಿ ಹಿಡಿದು ತಂದು ಠಾಣೆಯಲ್ಲಿ ಕುಳ್ಳಿರಿಸಿದ ಅಣುಕು ಪ್ರದರ್ಶನ ಆ 22 ರಂದು ಸುಳ್ಯ ಪೊಲೀಸರಿಂದ ನಡೆಯಿತು.
ಘಟನೆಯನ್ನು ನೋಡಿ ಗಾಬರಿಗೊಂಡಿದ್ದ ಸಾರ್ವಜನಿಕರು ಸುಳ್ಯ ಪೊಲೀಸರಿಂದ ಡಕಾಯಿತಿ ಬಗ್ಗೆ ಅಣುಕು ಪ್ರದರ್ಶನ ಎಂದು ತಿಳಿದ ಬಳಿಕ ನಿಟ್ಟುಸಿರು ಬಿಟ್ಟ ಘಟನೆಯೂ ಕೂಡ ಇದರಿಂದ ನಡೆಯಿತು.

ಸುಳ್ಯದ ಚಿನ್ನದ ಅಂಗಡಿಯೊಂದರಿಂದ ಡಕಾಯಿತಿ ನಡೆದು ಕಳ್ಳರು ಚಿನ್ನವನ್ನು ಎಗರಿಸಿ ಪರಾರಿಯಾಗುವುದು ಬಳಿಕ ಅಂಗಡಿಯವರು 112 ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದಾಗ ಪೊಲೀಸರು ಕಳ್ಳರನ್ನು ಬೆನ್ನಟ್ಟಿ ಹಿಡಿದು ಠಾಣೆಗೆ ತರುವುದು ಸೇರಿದಂತೆ ವಿವಿಧ ಮಾದರಿಗಳನ್ನು ಪ್ರದರ್ಶನದಲ್ಲಿ ಮಾಡಲಾಯಿತು.
ಡಕಾಯಿತರಾಗಿ ಸುಳ್ಯ ಠಾಣೆಯ ಪಿ ಸಿ ಗಳಾದ ಪ್ರಕಾಶ್, ಸಂತೋಷ್, ಹಾಲೇಶ್,ಹಾಗೂ ಇತರರು ಮುಖದಲ್ಲಿ ಮಾಸ್ಕ್ ಧರಿಸಿ ಡಕಾಯಿತರಾಗಿ ಕಾರಿನಲ್ಲಿ ಬಂದು ಶ್ರೀರಾಮ್ ಪೇಟೆ ಬಳಿ ಜ್ಯುವೆಲರಿ ಶಾಪಿಗೆ ನುಗ್ಗುತ್ತಾರೆ.
ಅಲ್ಲಿ ಅವರು ತಮ್ಮ ಬಳಿ ತಂದಿದ್ದಂತಹ ಬಂದೂಕು ಹಾಗೂ ಮಾರಕಾಯುದ್ಧಗಳನ್ನು ತೋರಿಸಿ ಅಂಗಡಿಯ ಸಿಬ್ಬಂದಿಗಳನ್ನು ಭಯ ಭೀತರಾಗಿಸಿ ಅಲ್ಲಿ ಮೊದಲೇ ತಂದಿಟ್ಟಂತಹ ಕೃತಕ ಚಿನ್ನಾಭರಣಗಳನ್ನು ಲೂಟಿ ಮಾಡಿ ಬ್ಯಾಗಿನಲ್ಲಿ ತುಂಬಿಸಿ ಕಾರಿನಲ್ಲಿ ಪರಾರಿ ಯಾಗುತ್ತಾರೆ.















ಈ ಸಂದರ್ಭದಲ್ಲಿ ಅಂಗಡಿಯ ಮಾಲಕರು ಗಾಬರಿಗೊಂಡು 112 ಪೋಲಿಸ್ ಸಂಖ್ಯೆಗೆ ಕರೆಯನ್ನು ಮಾಡುತ್ತಾರೆ. ಸೋಣಂಗೇರಿ ಬಳಿ ನಿಂತಿರುವ 112 ಗಸ್ತು ಜೀಪು ಅಲ್ಲಿಂದ ಸುಳ್ಯ ಮಾರ್ಗವಾಗಿ ಬಂದು ಡಕಾಯಿತರು ಹೋಗುವ ಕಾರನ್ನು ಹಿಂಬಾಲಿಸಿ ಕೊಂಡು ಹೋಗುತ್ತಾರೆ.
ಈ ಸಂಧರ್ಭದಲ್ಲಿ ಪೊಲೀಸರು ಜಾಲ್ಸೂರು ಚಕ್ ಪೋಸ್ಟ್ ಗೆ ಮಾಹಿತಿ ನೀಡಿದಾಗ ಅಲ್ಲಿ ಕರ್ತವ್ಯ ದಲ್ಲಿರುವ ಪೊಲೀಸರು ಡಕಾಯಿತರು ಬರುವ ಕಾರನ್ನು ತಡೆಯಲು ಪ್ರಯತ್ನಿಸುವುದು ಮತ್ತು ಅಲ್ಲಿಗೆ ಬಂದ ಗಸ್ತು ಪೊಲೀಸರು ಸಾಹಸ ಮಯವಾಗಿ ಕಳ್ಳರನ್ನು ಹಿಡಿಯಲು ಪ್ರಯತ್ನಿ ಸುವಾಗ ಅವರು ತಪ್ಪಿಸಲು ಮುಂದಾಗುತ್ತಾರೆ. ಆದರೂ ಬಿಡದ ಪೊಲೀಸರು ಕಳ್ಳ ರನ್ನು ಹಿಡಿದು ಜೀಪಿನಲ್ಲಿ ಕುಳ್ಳಿರಿಸಿ ಅವರನ್ನು ಸುಳ್ಯ ಠಾಣೆಗೆ ತರುವುದು
ಈ ಎಲ್ಲಾ ಪ್ರದರ್ಶನ ನಡೆಯಿತು.
ಪೊಲೀಸರಿಗೆ ಇದು ಪ್ರದರ್ಶನ ವಾಗಿದ್ದರೂ ಸಾರ್ವಜನಿಕರು ಮಾತ್ರ ಕೆಲಕಾಲ ಆತಂಕ ಪಡುವಂತೆ ಆಯಿತು.
ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ಮತ್ತು ಎಸ್ ಐ ಸಂತೋಷ್ ರವರ ನೇತ್ರತ್ವದಲ್ಲಿ ನಡೆದ ಈ ಅಣುಕು ಪ್ರದರ್ಶನದಲ್ಲಿ ಡಕಾಯಿತರಾಗಿ ಪಿ ಸಿ ಗಳಾದ ಪ್ರಕಾಶ್, ಸಂತೋಷ್, ಹಾಲೇಶ್ ಬೆನ್ನಟ್ಟುವ ಪೊಲೀಸ್ ವಾಹನದಲ್ಲಿ ಎ ಎಸ್ ಐ ಉದಯ ಭಟ್, ಚಾಲಕ ಪಿ ಸಿ ಸೋಮಪ್ಪ ಈರೇಮಠ, ಚಕ್ ಪೋಸ್ಟ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಸತೀಶ್, ಹಾಗೂ ಪಿ ಸಿ ಸೋಮಶೇಖರ್ ಭಾಗವಹಿಸಿದ್ದರು.
ಬಳಿಕ ಮಾತನಾಡಿದ ಎಸ್ ಐ ಸಂತೋಷ್ ರವರು ಡಕಾಯಿತಿ ನಡೆದಾಗ ಸ್ಥಳೀಯರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಇದರಿಂದ ಆರೋಪಿಗಳನ್ನು ಹಿಡಿಯಲು ಸಹಾಯವಾಗುತ್ತದೆ.ಅಲ್ಲದೆ ಅಪರಾಧ ಕೃತ್ಯಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಸುರಕ್ಷತಾ ಕ್ರಮ ಕೈಗೊಳ್ಳುತ್ತಾರೆ ಎಂದು ನೆರೆದ ಜನರಿಗೆ ತಿಳಿಸಿದರು.










