ಕಲ್ಮಡ್ಕ ಯುವಸ್ಪೂರ್ತಿ ಸೇವಾ ಸಂಘದ ವತಿಯಿಂದ ಹತ್ತನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ- ದಶ ಸಂಭ್ರಮ” ಕಾರ್ಯಕ್ರಮ ಆ. 16 ಮತ್ತು ಆ.17 ರಂದು ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಸಭಾಂಗಣದಲ್ಲಿ ನಡೆಯಿತು.















ಗ್ರಾಮದೈವ ಶ್ರೀ ನೆಲ್ಲೂರಾಯ ದೈವಸ್ಥಾನದ ಮೊಕ್ತೇಸರರಾದ ಗಂಗಾಧರ ಗೌಡ ಮರಕ್ಕಡ ದೀಪ ಪ್ರಜ್ವಲನೆ ನಡೆಸಿ “ದಶ ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನವೋದಯ ಸಂಘದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಬಿ ಶಿವರಾಮ ಕಲ್ಮಡ್ಕ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮಪಾಲ ಗೌಡ ಮರಕ್ಕಡ,ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯ ನಿರ್ವಾಣಾಧಿಕಾರಿ ಪ್ರಶಾಂತ್ ಜೋಗಿಬೆಟ್ಟು,ಶ್ರೀ ರಾಮ ಮಂದಿರ ಸೇವಾ ಟ್ರಸ್ಟ್ ಅಧ್ಯಕ್ಷರಾದ ರಮೇಶ್ ತಿಪ್ಪನಕಜೆ ಸಾರ್ವಜನಿಕ ದೇವತಾರಾಧನಾ ಸಮಿತಿ ಅಧ್ಯಕ್ಷರಾದ ಪೂವಪ್ಪ ಗೌಡ ಶೆಟ್ಟಿಗದ್ದೆ, ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಲೋಕಯ್ಯ ನಾಯ್ಕ ಬೊಳಿಯೂರು,ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಅಧ್ಯಕ್ಷರಾದ ವಿಜಯ್ ಕುಮಾರ್ ಉಬರಡ್ಕ , ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷರಾದ ಲಕ್ಷ್ಮೀ ನಾರಾಯಣ ನಡ್ಕ,ಮರಾಠಿ ಸಂಘ ಗ್ರಾಮ ಸಮಿತಿ ಅಧ್ಯಕ್ಷರಾದ ಸೀತಾರಾಮ ಕಡಂಬುಕಾನ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಡ್ಕ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಜ್ರಾಕ್ಷಿ ಶ್ರೀಕಾಂತ್ ಕಲ್ಮಡ್ಕ, ಸಂಸ್ಕಾರ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ ಬಾಲಕೃಷ್ಣ ರೈ ಎಣ್ಮೂರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಘದ ಸದಸ್ಯ ರಾಮಚಂದ್ರ ಕಾಚಿಲ ಪ್ರಾರ್ಥನೆಯನ್ನು ನೆರವೇರಿಸಿದರು. ಅಶ್ವತ್ ಕುಳ್ಸಿಗೆ ಸ್ವಾಗತಿಸಿ ಜಯಂತ ಆರ್ ಕೆ ವಂದಿಸಿದರು.

ಉದ್ಘಾಟನಾ ಸಮಾರಂಭದ ಬಳಿಕ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.ಶನಿವಾರ ರಾತ್ರಿ ಗಂಟೆ 7 ರಿಂದ ಸಂಸ್ಕಾರ ಅಂಗನವಾಡಿ ಕೇಂದ್ರ ಕಲ್ಮಡ್ಕ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ಕಲಾ ಸಾರಥಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ಶ್ರೀ ಪುಷ್ಕಲ್ ಕುಮಾರ್ ತೋನ್ಸೆ ತಂಡದವರಿಂದ ಶ್ರೀ ಕೃಷ್ಣ ತುಲಾಭಾರ ಕಥಾ ಕೀರ್ತನಾ ಕಾರ್ಯಕ್ರಮ ನಡೆಯಿತು.
ಆ. 17 ರಂದು ಪುರುಷರ ಹಾಗೂ ಮಹಿಳೆಯರ ವಿಭಾಗದ ಮೊಸರು ಕುಡಿಕೆ ಹಾಗೂ ವಿವಿಧ ಸ್ಪರ್ಧೆಗಳು ಹಾಗೂ ಮುದ್ದು ಪುಟಾಣಿಗಳ ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು.ಅಪರಾಹ್ನ ಮೂರು ಗಂಟೆಯಿಂದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.ಸಮಾರೋಪ ಸಮಾರಂಭದಲ್ಲಿ ಶ್ರೀದತ್ತಾಂಜನೇಯ ಕ್ಷೇತ್ರ,ದಕ್ಷಿಣ ಗಾಣಗಾಪುರ ಮಹಾಸಂಸ್ಥಾನ ಶ್ರೀ ಕ್ಷೇತ್ರ ಒಡಿಯೂರು
ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ,ಶ್ರೀ ಆಶೀರ್ವಚನ ನೀಡಿದರು.ಸಭಾಧ್ಯಕ್ಷತೆಯನ್ನು ಯುವಸ್ಪೂರ್ತಿ ಸೇವಾ ಸಂಘದ ಅಧ್ಯಕ್ಷರಾದ ಶಿವರಾಮ ಕೊಳೆಂಜಿಕೋಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ,ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪಿ ಉದಯ್ ಕುಮಾರ್ ಬೆಟ್ಟ, ಸಂಗಮ ಕಲಾ ಸಂಘ(ರಿ.) ಇದರ ಅಧ್ಯಕ್ಷರಾದ ಶ್ಯಾಮ್ ಭಟ್ ಕೆರೆಕ್ಕೋಡಿ,ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಮೊಕ್ತೇಸರರಾದ ರಾಮಚಂದ್ರ ಎಡಪತ್ಯ ಉಪಸ್ಥಿತರಿದ್ದರು.

ಸನ್ಮಾನ ಸಮಾರಂಭ:
ವೇದಿಕೆಯಲ್ಲಿ ಕಲಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ರಂಗಕರ್ಮಿ ಮಹಾಬಲ ಕೆರೆಕ್ಕೋಡಿ ಇವರಿಗೆ “ಕಲ್ಮಡ್ಕ ಕಲಾ ಗೌರವ” ಹಾಗೂ ಶಿಕ್ಷಕಿ ಶ್ರೀ ಮತಿ ಗಿರಿಜಾ ಮಾಳಪ್ಪಮಕ್ಕಿ ಇವರಿಗೆ ಗೌರವ ಅಭಿನಂದನೆ ಹಾಗೂ ಕಲಾವಿದ,ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಸಾಯಿ ನಾರಾಯಣ ಶೆಟ್ಟಿಗದ್ದೆ ಇವರಿಗೆ ಹುಟ್ಟೂರ ಅಭಿನಂದನೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ ಇದರ ನಿವೃತ ಮುಖ್ಯ ಗುರುಗಳಾದ ವಿ ಸುಬ್ರಾಯ ಓಣಿಯಡ್ಕ ಅಭಿನಂದನ ಭಾಷಣ ಮಾಡಿದರು. ವಕೀಲರ ಸಂಘ ಸುಳ್ಯ ಇದರ ಉಪಾಧ್ಯಕ್ಷರಾದ ದಿಲೀಪ್ ಬಾಬ್ಲುಬೆಟ್ಟು, ಪಂಬೆತ್ತಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಗಣೇಶ ಭೀಮಗುಳಿ ಹಾಗೂ ಯುವಸ್ಪೂರ್ತಿ ಸೇವಾ ಸಂಘದ ಪೂರ್ವಾಧ್ಯಕ್ಷರುಗಳಾದ ಶೇಷಪ್ಪ ಮಾಳಪ್ಪಮಕ್ಕಿ, ಹರೀಶ್ ಮಾಳಪ್ಪಮಕ್ಕಿ, ಕರುಣಾಕರ ಶೆಟ್ಟಿಗದ್ದೆ,ಶ್ರೀ ಅಶೋಕ್ ಗೊಳ್ತಾಜೆ, ದೇವಿಪ್ರಸಾದ್ ಮರಕ್ಕಡ ಹಾಗೂ ಉಪಾಧ್ಯಕ್ಷರಾದ ಚಿದಾನಂದ ಮಾಳಪ್ಪಮಕ್ಕಿ,ಕಾರ್ಯದರ್ಶಿ ನವೀನ್ ಮೂಲೆಮನೆ ವೇದಿಕೆಯಲ್ಲಿ ಉಪಸ್ತಿತರಿದ್ದರು.
ಸಚಿತ್ ಕಲ್ಮಡ್ಕ ಸ್ವಾಗತಿಸುವುದರೊಂದಿಗೆ ಪ್ರಾಸ್ತಾವಿಕ ಮಾತನಾಡಿದರು. ಚಿದಾನಂದ ಮಾಳಪ್ಪಮಕ್ಕಿ, ಜಯಪ್ರಕಾಶ್ ಮಾಳಪ್ಪಮಕ್ಕಿ ಹಾಗೂ ನಿತಿನ್ ಮಾಳಪ್ಪಮಕ್ಕಿ ಸನ್ಮಾನ ಪತ್ರ ವಾಚಿಸಿದರು. ಪುನೀತ್ ಮೂಲೆಮನೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಿರ್ವಹಿಸಿದರು. ರಂಜಿತ್ ಮಾಳಪ್ಪಮಕ್ಕಿ ಧನ್ಯವಾದ ನೆರವೇರಿಸಿದರು. ತೀರ್ಥಾನಂದ ಕೊಡಂಕಿರಿ ಕಾರ್ಯಕ್ರಮ ನಿರೂಪಣೆಯನ್ನು ನಡೆಸಿದರು.
ನವೀನ್ ಮೂಲೆಮನೆ,ಜಯರಾಜ್ ಕಡಂಬುಕಾನ, ಶೇಷಪ್ಪ ಮಾಳಪ್ಪಮಕ್ಕಿ, ಶ್ರೀಮತಿ ವಜ್ರಾಕ್ಷಿ ಶ್ರೀಕಾಂತ್, ಜಯಂತ ಆರ್ ಕೆ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರುಗಳ ಕೂಡುವಿಕೆಯಿಂದ “ಪಾಂಚಜನ್ಯ – ರಾಧಾ ವಿಲಾಸ – ಗರುಡ ಗರ್ವಭಂಗ” ಯಕ್ಷಗಾನ ಬಯಲಾಟ ನಡೆಯಿತು. ಸಚಿತ್ ಕಲ್ಮಡ್ಕ,ಪುನೀತ್ ಮೂಲೆಮನೆ ಕಾರ್ಯಕ್ರಮಗಳನ್ನು ಆಯೋಜಿಸಿದರು.










