ಸ್ಥಳೀಯರ ಮಾಹಿತಿ ಮೇರೆಗೆ ವ್ಯಾನನ್ನು ಗಾಂಧಿನಗರದಲ್ಲಿ ಹಿಡಿದ ಪೊಲೀಸರು

ಕಲ್ಲುಗುಂಡಿ ಪೇಟೆ ಬದಿಯಲ್ಲಿ ನಿಲ್ಲಿಸಿದ್ದ 2 ದ್ವಿಚಕ್ರವಾಹನಗಳಿಗೆ ಆ ರಸ್ತೆಯಲ್ಲಿ ಬಂದ ವ್ಯಾನೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ವೇಗವಾಗಿ ಸುಳ್ಯದ ಕಡೆ ಬಂದಿದ್ದ ವ್ಯಾನ್ ಅನ್ನು ಸ್ಥಳೀಯರ ಮಾಹಿತಿಯ ಮೇರೆಗೆ ಸುಳ್ಯದ ಗಾಂಧಿನಗರದಲ್ಲಿ ತಡೆದ ಘಟನೆ ವರದಿಯಾಗಿದೆ.
ಕಲ್ಲುಗುಂಡಿ ಪೇಟೆ ಬದಿಯಲ್ಲಿ ನಿಲ್ಲಿಸಿದ್ದ 2 ದ್ವಿಚಕ್ರವಾಹನಗಳಿಗೆ ಆ ರಸ್ತೆಯಲ್ಲಿ ಬಂದ ವ್ಯಾನೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ವೇಗವಾಗಿ ಸುಳ್ಯದ ಕಡೆ ಬಂದಿತ್ತು.

ವಿಷಯ ತಿಳಿದ ಆಂಬುಲೆನ್ಸ್ ಚಾಲಕರು ಕೂಡಲೇ ತಮ್ಮ ವಾಟ್ಸಪ್ ಗ್ರೂಪ್ ಮೂಲಕ ಮಾಹಿತಿಯನ್ನು ನೀಡಿದ್ದು ಬಳಿಕ ಸುಳ್ಯದ ಗಾಂಧಿನಗರದ ಬಳಿ ಪೊಲೀಸರ ಸಹಕಾರದಿಂದ ವ್ಯಾನನ್ನು ತಡೆದು ನಿಲ್ಲಿಸಿ ಪೊಲೀಸ್ ಠಾಣೆಗೆ ತಂದಿರುವುದಾಗಿ ತಿಳಿದು ಬಂದಿದೆ.















ವ್ಯಾನ್ ಶಿವಮೊಗ್ಗ ಕಡೆ ಇಂದ ಬರುತ್ತಿದ್ದು ಡಿಕ್ಕಿ ಆಗಿರುವ ದ್ವಿಚಕ್ರವಾಹನಗಳು ಅಲ್ಪ ಸ್ವಲ್ಪ ಜಖಂಗೊಂಡಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸ್ ಠಾಣೆಯಲ್ಲಿ ವ್ಯಾನ್ ಚಾಲಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.











