ಬೆಟ್ಟಂಪಾಡಿ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ

0

ಸುಳ್ಯದ ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರದ ವಠಾರದಲ್ಲಿ 21 ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಠಮಿಯು ಆ. 17 ಜರುಗಿತು. ಬೆಳಿಗ್ಗೆ ವಿವಿಧ ಆಟೋಟ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಅಂಗನವಾಡಿ ಮಕ್ಕಳಿಗೆ, ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಊರಿನ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿತು. ಮದ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಾಗೂ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು.

ಈ ಸಮಾರಂಭದಲ್ಲಿ ಅಧ್ಯಕ್ಷತೆ ಯನ್ನು ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪ್ಪಾಡಿ ಇದರ ಅಧ್ಯಕ್ಷರಾಗಿರುವ ಎ ಆರ್. ವಿಠ್ಠಲ ರವರು ವಹಿಸಿದ್ದರು.

ಧಾರ್ಮಿಕ ಉಪನ್ಯಾಸ ವನ್ನು ಶ್ರೀ ಕ್ಷೇತ್ರ ಯೋಜನಾಧಿಕಾರಿಗಳಾದ ಮಾಧವ ಗೌಡ ಹಾಗೂ ಮುಖ್ಯ ಅತಿಥಗಳಾಗಿ ಗಾಯಕರಾಗಿರುವ ವಿಜಯಕುಮಾರ್ ಸುಳ್ಯ, ಸ್ಥಾಪಕಧ್ಯಕ್ಷರಾಗಿರುವ ಮಲ್ಲೇಶ್ ಬೆಟ್ಟಂಪ್ಪಾಡಿ, ಪಾಪ್ಯುಲರ್ ಬೇಕರಿಯ ಮಾಲಕರಾದ ಅನೂಪ್ ಕಮಲಾಕ್ಷ ಪೈ ಮತ್ತು ದೇವ ನರ್ಸರಿ ಮಾಲಕರಾಗಿರುವ ಸೋಜೋ ಜಾನ್ ರವರು ಉಪಸ್ಥಿತ ರಿದ್ದರು.


ಮಂಜುನಾಥೇಶ್ವರ ಭಜನಾ ಮಂದಿರದ ಉಪಾಧ್ಯಕ್ಷರಾದ ಆನಂದ ಬೆಟ್ಟಂಪ್ಪಾಡಿ ವಂದಿಸಿ, ಕಾರ್ಯದರ್ಶಿಗಳಾದ ಚಂದ್ರ ರಾವ್ ರವರು ಧನ್ಯವಾದ ಮಾಡಿ, ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಆ ಬಳಿಕ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಜರುಗಿತು.