ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ವಾರ್ಷಿಕ 565. 84 ಕೋಟಿ ವ್ಯವಹಾರ, 1,72,93,636 ಲಾಭಾಂಶ

ಶೇ.8 ಡಿವಿಡೆಂಡ್ ಘೋಷಣೆಯಾಗಿ ₹97,34,582 ಹಂಚಿಕೆ



ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಆ. 24ರಂದು ಸಂಘದ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ನಿರ್ದೇಶಕರುಗಳಾದ ಮುಳಿಯ ಕೇಶವ ಭಟ್, ವೆಂಕಟ್ ದಂಬೆಕೋಡಿ, ನವೀನ್ ಬಾಳುಗೋಡು, ಬಿ.ಸಿ ಕುಂಞ ಬಳ್ಳಕ್ಕ, ವಿನ್ಯಾಸ್ ಕೊಚ್ಚಿ , ರವೀಂದ್ರ ಅಡ್ಡನಪಾರೆ, ಪದ್ಮನಾಭ ಮೀನಾಜೆ, ಜನಾರ್ದನ ಅಚ್ರಪ್ಪಾಡಿ, ಶ್ರೀಮತಿ ತಿಲಕ ಕೊಲ್ಯ, ಶ್ರೀಮತಿ ವಿನುತಾ ಪ್ರಶಾಂತ್ ಜಾಕೆ, ಕಾರ್ಯನಿರ್ವಾಹಣಾಧಿಕಾರಿ ಶರತ್ ಎ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘವು ವಾರ್ಷಿಕ.565.84 ಕೋಟಿ ವ್ಯವಹಾರ ಮಾಡಿದ್ದು , ₹1,72,93,636 ಲಾಭಾಂಶ ಪಡೆದಿದ್ದು
ಶೇ.8 ಡಿವಿಡೆಂಡ್ ಘೋಷಣೆಯಾಗಿದೆ. ಅದರಂತೆ ₹97,34,582 ಶೇರ್ ಧಾರರಿಗೆ ಹಂಚಿಕೆ ಆಗಲಿದೆ. ಅಲ್ಲದೆ ವಿವಿಧ ಶೇಕಡಾವಾರು ಹಂಚಿಕೆಯನ್ನು ವಿವರಗಳನ್ನು ಸಭೆಗೆ ಸಂಘದ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಣಾಧಿಕಾರಿ ವಿವರಿಸಿದರು.
ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ಸ್ವಾಗತಿಸಿ, ಕಾರ್ಯ ನಿರ್ವಹಣಾಧಿಕಾರಿ ಶರತ್ ಎ.ಕೆ ವಂದಿಸಿದರು. ಕಿಶೋರ್ ಕುಮಾರ್ ಪೈಕ ಬೊಮ್ಮದೇರೆ ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ವಿವಿದ ವಿಚಾರಗಳ ಚರ್ಚೆ ನಡೆಯಿತು. ಸಭೆಯಲ್ಲಿ ಅತಿ ಹೆಚ್ಚು ಅಡಿಕೆಯನ್ನು ಸೊಸೈಟಿ ಮೂಲಕ ಕ್ಯಾಂಪ್ಕೋ ಗೆ ಮಾರಿದ ಸುಬ್ರಹ್ಮಣ್ಯ ಪಿ.ಸಿ, ಮುಳಿಯ ಕೇಶವ ಭಟ್, ಅನಿತಾ ಪಾರೆಪ್ಪಾಡಿ ಹಾಗೂ ಕಾಳುಮೆಣಸು ಮಾರಾಟ ಮಾಡಿದಕ್ಕಾಗಿ ನವೀನ್ ಬೊಮ್ಮದೇರೆ ಪೈಕ, ಅಯ್ಯನ ಗೌಡ ಪೂಜಾರಿಕೋಡಿ, ಗಿರಿಯಪ್ಪ ಗೌಡ ಪೈಕ, ಕೊಕ್ಕೋ ಮಾರಾಟ ಮಾಡಿದಕ್ಕಾಗಿ ತಿಮ್ಮಪ್ಪ ಗೌಡ ಸಿ‌.ಎಚ್, ರಘುನಾಥ ಮುತ್ಲಾಜೆ, ಕಮಲಾಕ್ಷ ಎಸ್‌. ಎನ್, ಅತಿ ಹೆಚ್ಚು ಗೊಬ್ಬರ ಖರೀದಿ ಮಾಡಿದಕ್ಕಾಗಿ ರತ್ನಾವತಿ, ಮುಳಿಯ ತಿಮ್ಮಪಯ್ಯ, ನಿತ್ಯಾನಂದ ಪಿ.ಸಿ ಅತಿ ಹೆಚ್ಚು ಪೆಟ್ರೋಲ್ ಖರೀದಿಗಾರಿ ಶ್ರೇಯಸ್ ಮುತ್ಲಾಜೆ, ಜ್ಞಾನ ದೀಪ ಶಾಲೆ ಎಲಿಮಲೆ ಪರವಾಗಿ ಎ.ವಿ ತೀರ್ಥರಾಮ, ಉಲ್ಲಾಸ್ ಮಲ್ಲಾರ, ಸಹಕಾರಿ ಮಾರ್ಟ್ ನಿಂದ ಅತಿ ಹೆಚ್ಚು ದಿನಸಿ ಖರೀದಿಗಾಗಿ ಶಿವಪ್ರಕಾಶ್ ಕಡಪಳ, ಬಾಲಕೃಷ್ಣ ಗೌಡ ಹಿರಿಯಡ್ಕ, ಶ್ಯಾಮ್ ಪ್ರಸಾದ್ ಎಂ, ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ, ಸರ್ಕಾರಿ ಮಾದರಿ ಶಾಲೆಯ ಪರವಾಗಿ ಶುಭಲಕ್ಷ್ಮೀ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಪರವಾಗಿ ಉಷಾ ಮಲ್ಕಜೆ ಅವರುಗಳನ್ನು ಗೌರವಿಸಲಾಯಿತು.