ನಿಂತಿಕಲ್ಲು : ಉಚಿತ ಆರೋಗ್ಯ ತಪಾಸಣಾ ಶಿಬಿರ – ಸನ್ಮಾನ

0

ರೈತರ ಆರೋಗ್ಯಕ್ಕಾಗಿ ಶಿಬಿರ : ಭಾಗೀರಥಿ ಮುರುಳ್ಯ

ತಾವುಗಳು ಡಾಕ್ಟರ್ ಆಗುವುದು ಬೇಡ : ಡಾ. ಮಹಾಬಲೇಶ್ ಶೆಟ್ಟಿ

ಮುರುಳ್ಯ-ಎಣ್ಮೂರು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಂತಿಕಲ್ಲು, ಸಮರ್ಪಣ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಇದರ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.


ದೀಪ ಪ್ರಜ್ವಲನೆ ಮಾಡಿ ಶಾಸಕಿ ಕು. ಭಾಗಿರಥಿ ಮುರುಳ್ಯರವರು ಮಾತಾಡುತ್ತಾ ರೈತರು ಆರೋಗ್ಯವಿದ್ದಲ್ಲಿ ಸಂಘದ ಬೆಳವಣಿಗೆ ಆಗುತ್ತದೆ, ರೈತರಿಗೆ ಉಚಿತ ಆರೋಗ್ಯ ಶಿಬಿರವು ಸಂಘದ ಕೊಡುಗೆಯಾಗಿದೆ ಎಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದರು.


ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಸ್ಟೂಡೆಂಟ್ಸ್ ಆಪೆರಸ್ ಕ್ಷೇಮ ಡೈರೆಕ್ಟರ್. ಪ್ರೊ. ಮಹಾಬಲೇಶ್ ಶೆಟ್ಟಿ ಅವರು ಮಾತಾಡುತ್ತಾ, ಮಂಗಳೂರಿನಲ್ಲಿ ಮೂರು ಆಸ್ಪತ್ರೆಗಳಲ್ಲಿ ಸುಮಾರು ತಲಾ ೨೭೦೦, ಮಹಿಳೆಯರಿಗೆ ವರ್ಷಕ್ಕೆ ಉಚಿತ ಹೆರಿಗೆ ಸೌಲಭ್ಯಗಳಿವೆ , ದಕ್ಷಿಣ ಕನ್ನಡದ ಜನರು ೧೦೦-೧೫೦ ಮಹಿಳೆಯರು ಮಾತ್ರ ಉಪಯೋಗ ಪಡೆದುಕೊಳ್ಳುತ್ತಾರೆ, ಎಲ್ಲರೂ ಉಚಿತ ಸೌಲಭ್ಯಗಳನ್ನು ಪಡೆದುಕೊಳ್ಳಿ, ಅಸೌಖ್ಯಕ್ಕೊಳಗಾದಾಗ ತಾವೇ ಔಷಧಿ ಪಡೆದು ಡಾಕ್ಟರ್‌ಗಳಾಗಬೇಡಿ . ೧೯೩೦ ರಿಂದ ಆಂಟಿಬಯಾಟಿಕ್ಸ್ ಔಷಧಿ ತಯಾರಾಗಿಲ್ಲ. ದೇಶದ ಪ್ರಧಾನಿ ಅವರೇ ಈ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.


ವೇದಿಕೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ನಡುಬೈಲು, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಎಣ್ಮೂರುಗುತ್ತು ಇದ್ದು ಸಂಘದ ಸದಸ್ಯರಾದ ಉಮೇಶ್ ರೈ, ಡಿಂಬ್ರಿ ಮತ್ತು ಸುನಿತಾ ಉಮೇಶ್ ರೈ ಯವರ ಪುತ್ರ ಪಿ.ಯು.ಸಿ ಯಲ್ಲಿ ರಾಜ್ಯಕ್ಕೆ ೮ನೇ ರ್‍ಯಾಂಕ್ ಪಡೆದುಕೊಂಡ ನಿಶ್ಚಲ್ ರೈ ಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಡಾ. ರವಿಶಂಕರ್, ಡಾ. ಆಶಿಶ ಜಾರ್ಜ್, ಡಾ. ಹನಿಷಾ ಮೋಹನ್, ಡಾ. ಅತಿನ್ ರಾಜ್ ಭಾಗವಹಿಸಿದ್ದರು. ಸಂಘದ ಮ್ಯಾನೇಜರ್ ಚಿದಾನಂದ ರೈ ಸ್ವಾಗತಿಸಿ, ನಿರ್ದೇಶಕ ಅನೂಪ್ ಬಿಳಿ ಮಲೆ ವಂದಿಸಿದರು. ಸಮರ್ಪನಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರಾದ ವಸಂತ ವಿರಮಂಗಲ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

  • ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ