ಸುಳ್ಯ : ಛಾಯಾಚಿತ್ರ ಪ್ರದರ್ಶನ ‘ಫೋಟೋ ಗ್ಯಾಲರಿ ಡಿಸ್‌ಪ್ಲೇ’

0

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯದ ನೇತೃತ್ವದಲ್ಲಿ ರೋಟರಿ ಕ್ಲಬ್ ಸುಳ್ಯ, ರೋಟರಿ ಕ್ಲಬ್ ಸುಳ್ಯ ಸಿಟಿ, ಹಾಗೂ ಇನ್ನರ್‌ವೀಲ್ ಸಹಯೋಗದಲ್ಲಿ ವಿಶ್ವ ಫೋಟೋಗ್ರಫಿ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಛಾಯಾಚಿತ್ರ ಪ್ರದರ್ಶನ ‘ಫೋಟೋ ಗ್ಯಾಲರಿ ಡಿಸ್‌ಪ್ಲೇ’ ವರ್ಣ ವೈವಿಧ್ಯ ಛಾಯಾಚಿತ್ರಗಳ ಅದ್ಭುತ ಲೋಕ ಆ. 23 ರಂದು ಸುಳ್ಯದ ರೋಟರಿ ಶಾಲಾ ಸಭಾಂಗಣದಲ್ಲಿ ನಡೆಯಿತು.

ಸುಳ್ಯ ರೋಟರಿ ಕ್ಲಬ್‌ ಅಧ್ಯಕ್ಷ ಡಾ.ರಾಮ್ ಮೋಹನ್ ಉದ್ಘಾಟಿಸಿ ಶುಭ ಹಾರೈಸಿದರು. ಎಸ್‌ಕೆಪಿಎ ಸುಳ್ಯ ವಲಯದ ಅಧ್ಯಕ್ಷ ಶಶಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಫೋಟೋಗ್ರಾಫ‌ರ್ ಕೆ.ಎಸ್.ಗೋಪಾಲಕೃಷ್ಣ, ರೋಟರಿ ಸುಳ್ಯ ಸಿಟಿ ಅಧ್ಯಕ್ಷ ಹೇಮಂತ್ ಕಾಮತ್, ಇನ್ನ‌ರ್ ವೀಲ್ ಅಧ್ಯಕ್ಷೆ ಸವಿತಾ ಸಿ.ಕೆ, ರೋಟರಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಪ್ರಭಾಕರನ್ ನಾಯರ್, ಪೋಟೋಗ್ರಾಫರ್ ಹರಿ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯ ವಲಯದ ಫೋಟೋಗ್ರಾಫರ್‌ಗಳು ಕ್ಲಿಕ್ಕಿಸಿದ
ಸುಮಾರು 600ಕ್ಕೂ ಅಧಿಕ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ವರ್ಣಮಯ ಚಿತ್ರಗಳು ನೋಡುಗರ ಮನಸೂರೆಗೊಂಡಿತು.

ಪರಿಸರ, ವನ್ಯಜೀವಿ, ಜಾತ್ರೆ, ರಥೋತ್ಸವ, ದೈವಗಳ, ವ್ಯಕ್ತಿಗಳ, ಸಮಾರಂಭಗಳು, ಕೃಷಿ ಚಟುವಟಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳ ವೈವಿಧ್ಯಮಯ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.