ಕಳಂಜ ಗೌಡ ಗ್ರಾಮ ಸಮಿತಿಯ ವತಿಯಿಂದ ತ್ರೋಬಾಲ್ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಪಡೆದ ಕುl ಭವಿತಾ ಬೇರಿಕೆ ಅವರನ್ನು ಕಳಂಜ ಯುವಕ ಮಂಡಲದಲ್ಲಿ
ಆ. 23 ರಂದು ಗೌರವಿಸಲಾಯಿತು.
















ಸಭೆಯ ಅಧ್ಯಕ್ಷತೆಯನ್ನು ಗೌಡ ಗ್ರಾಮ ಸಮಿತಿಯ ಅಧ್ಯಕ್ಷ ರುಕ್ಮಯ ಗೌಡ ಕಳಂಜ ವಹಿಸಿದ್ದರು. ವೇದಿಕೆಯಲ್ಲಿ ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘದ ನಿಕಟಪೂರ್ವ ನಿರ್ದೇಶಕ ಕೂಸಪ್ಪ ಗೌಡ ಮುಗುಪ್ಪು ಕಳಂಜ ಗ್ರಾ. ಪಂ.ಅಧ್ಯಕ್ಷ ಬಾಲಕೃಷ್ಣ ಗೌಡ ಬೇರಿಕೆ, ಗೌಡ ಗ್ರಾಮ ಸಮಿತಿಯ ಕಾರ್ಯದರ್ಶಿ ಡಾl ನಾರಾಯಣ ಶೇಡಿಕಜೆ, ಉಪಾಧ್ಯಕ್ಷ ಮೇದಪ್ಪ ಗೌಡ ತಂಟೆಪ್ಪಾಡಿ ಉಪಸ್ಥಿತರಿದ್ದರು.

ಸಭೆಯಲ್ಲಿ ಕಳಂಜ ಗೌಡ ಗ್ರಾಮ ಸಮಿತಿಯ ಸಂಘಟನೆ ಬಗ್ಗೆ ಚರ್ಚಿಸಲಾಯಿತು. ಬಳಿಕ ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ತೃತೀಯ ಸ್ಥಾನ ಪಡೆದ ಭವಿತ ಬೇರಿಕೆ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಅವರ ಪೋಷಕರಾದ ಲಕ್ಷ್ಮಣ ಬೇರಿಕೆ ಮತ್ತು ಶ್ರೀಮತಿ ದಮಯಂತಿ ಉಪಸ್ಥಿತರಿದ್ದರು. ಸಭೆಯಲ್ಲಿ ಕಳಂಜ ಗ್ರಾಮ ಪಂಚಾಯತ್ ನ ವಸತಿ ಯೋಜನೆಯ ಫಲಾನುಭವಿಯೋರ್ವರ ಮನೆಯನ್ನು, ಪಂಚಾಯತ್ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ನಿರ್ಮಿಸಲ್ಪಟ್ಟ ಮನೆಗೆ ಸಹಾಯ ಹಸ್ತವಾಗಿ ರೂ.10 ಸಾವಿರ ರುಪಾಯಿ ಯನ್ನು ಕಾಮಧೇನು ಕ್ರಿಡಿಟ್ ಕೋ.ಅಪರೇಟಿವ್ ಸೊಸೈಟಿ ಬೆಳ್ಳಾರೆ ವತಿಯಿಂದ ನೀಡಿದ್ದು ಅದನ್ನು ಗ್ರಾ.ಪಂ ಅಧ್ಯಕ್ಷರಿಗೆ ಕೂಸಪ್ಪ ಗೌಡ, ಪ್ರೇಮಚಂದ್ರ, ಶ್ರಿಮತಿ ಗೀತಾ ಪ್ರೇಮಚಂದ್ರ ಅವರಿದ್ದು ಹಸ್ತಾಂತರಿಸಿದರು. ಶಿವರಾಮ ಕಜೆಮೂಲೆ ಕಾರ್ಯಕ್ರಮ ನಿರೂಪಿಸಿದರು.











