ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮುಂಬರುವ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶಾಂತಿ ಸಭೆಯು ಆ.24 ರಂದು ನಡೆಯಿತು.
ಪೊಲೀಸ್ ಠಾಣಾ ವ್ಯಾಪ್ತಿಯ ಧಾರ್ಮಿಕ ಮುಖಂಡರು ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು.
















ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕರವರು ಸ್ವಾಗತಿಸಿ ಬಳಿಕ ಮಾತನಾಡಿ ಮುಂಬರುವ ಗಣೇಶೋತ್ಸವ ಕಾರ್ಯಕ್ರಮವನ್ನು ಶಾಂತಿಯುತವಾಗಿ ಆಚರಿಸುವಂತೆ, ಇಲಾಖಾ ಮಾಹಿತಿಗಳನ್ನು ಪಾಲಿಸಿಕೊಂಡು ಆಚರಿಸಬೇಕೆಂದು ಹೇಳಿದರು.ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತೆನ್ನು ಅನುಸರಿಸಿಕೊಂಡು ಆಚರಿಸಬೇಕು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೆರವಣಿಗೆಗಳನ್ನು ನಡೆಸಬೇಕು.
ಸಭೆ ,ಸಮಾರಂಭ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದು.
ಧ್ವನಿವರ್ಧಕ ಬಳಸುವಾಗ ಇಲಾಖೆಯ ಅನುಮತಿ ಪಡೆಯಬೇಕು ಎಂದು ಹೇಳಿದರು.










