ಕೊಡಿಯಾಲ : ಬಿ. ಜೆ. ಪಿ ಶಕ್ತಿಕೇಂದ್ರ ಅಭ್ಯಾಸವರ್ಗ

0

ಕೊಡಿಯಾಲ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಲ್ಪಡ ಚಿದಾನಂದ ಉಪಾಧ್ಯರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು
ಕೊಡಿಯಾಲ ಬಿಜೆಪಿ ಹಿರಿಯ ಕಾರ್ಯಕರ್ತರಾದ ವೆಂಕಟೇಶ್ ಪೈ ಬಾಚೋಡಿ ನೆರವೇರಿಸಿದರು. ರಾಮಕೃಷ್ಣ ಭಟ್ ಬೆಳ್ಳಾರೆ ಸುಳ್ಯ ಬಿಜೆಪಿ ಮಂಡಲ ಉಪಾಧ್ಯಕ್ಷರು ಹಾಗೂ ಶುಭೋದ್ ರೈ ಮೇನಾಲ, ಬಿಜೆಪಿ ಮಂಡಲ ಕೋಶಾಧಿಕಾರಿ ಇವರು ಅಭ್ಯಾಸವರ್ಗ ಅವಧಿಯನ್ನು ನಡೆಸಿದರು. ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಸಮಾರೋಪ ಭಾಷಣ ಮಾಡಿದರು.


ವೇದಿಕೆಯಲ್ಲಿ ಬೆಳ್ಳಾರೆ ಮಹಾ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಅನೂಪ್ ಬಿಳಿಮಲೆ, ಕೊಡಿಯಾಲ ಶಕ್ತಿಕೇಂದ್ರ ಪ್ರಮುಖ್ ಚೇತನ್ ಕೊಡಿಯಾಲ, ಬೂತ್ ಅಧ್ಯಕ್ಷರಾದ ಹರೀಶ್ ಆರ್ವಾರ, ಪೂರ್ಣಿಮಾ ಕಲ್ಪಡ, ರಜನಿಶ್ ಸಾರಕರೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇಂದಿರಾ ಬಿ. ಕೆ ಮಹಿಳಾ ಮೋರ್ಚಾ ಅಧ್ಯಕ್ಷರು ಸುಳ್ಯ ಮಂಡಲ, ಬೆಳ್ಳಾರೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಜನಾರ್ದನ ಗೌಡ, ವನಿತಾ ಸಾರಕರೆ, ಬೀಯಲು ಬೇರ್ಯ.ಕಾರ್ಯಕರ್ತರು ಉಪಸ್ಥಿತರಿದ್ದರು.