ಗ್ರಾಹಕರಿಗೆ ಸ್ಪೆಷಲ್ ಆಫರ್- ಸ್ಕ್ರಾಚ್ ಕಾರ್ಡ್ ನಲ್ಲಿ 10ಲಕ್ಷ ಮೌಲ್ಯದ ಬಹುಮಾನ
ಸುಳ್ಯದ ಪ್ರಸಿದ್ಧ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಳಿಗೆ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಅಡ್ಕಾರ್ ಮಹೋತ್ಸವ ಆಗಸ್ಟ್ 25 ರಿಂದ ಆರಂಭಗೊಂಡು ಸೆಪ್ಟೆಂಬರ್ 7 ರವರೆಗೆ ನಡೆಯಲಿದೆ.
ಸಂಸ್ಥೆಯ 30ನೇ ವರ್ಷದ ಪಾದಾರ್ಪಣೆ ಮಾಡುತ್ತಿದ್ದು, ಇದರ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಲು ತಯಾರಾಗಿದೆ.















ಮಹೋತ್ಸವದ ಸಂದರ್ಭದಲ್ಲಿ ರೂ.5000ಕ್ಕೂ ಮೇಲ್ಪಟ್ಟ ಖರೀದಿಗೆ ಸ್ಕ್ರಾಚ್ ಕಾರ್ಡ್ ನಲ್ಲಿ ರೂ.10000 ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಗೆಲ್ಲುವ ಅವಕಾಶವಿದೆ. ಇದರೊಂದಿಗೆ ವಾರದ ಬಹುಮಾನ ಮತ್ತು ಬಂಪರ್ ಬಹುಮಾನ ಗೆಲ್ಲುವ ಅವಕಾಶವಿದೆ. ವಾರದ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ ವಿಜೇತರಿಗೆ ಇನ್ಫರ್ಡ್ ಸ್ಟವ್, ದ್ವಿತೀಯ ಬಹುಮಾನವಾಗಿ ಚೈನಾ ಪಾಟ್, ತೃತೀಯ ಬಹುಮಾನವಾಗಿ ಐರನ್ ಬಾಕ್ಸ್ ನೀಡಲಾಗುತ್ತದೆ. ಬಂಪರ್ ಬಹುಮಾನವಾಗಿ ಪ್ರಥಮ ವಿಜೇತರಿಗೆ ಬೆಡ್ ರೂಂ ಸೆಟ್, ದ್ವಿತೀಯ ಟಾಪ್ ಲೋಡ್ ವಾಷಿಂಗ್ ಮೆಷಿನ್, ತೃತೀಯ ಸೋಫಾ ಸೆಟ್ ನೀಡಲಾಗುತ್ತದೆ. ರೂ. 10ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸ್ಕ್ರಾಚ್ ಕಾರ್ಡ್ ನಲ್ಲಿ ಗ್ರಾಹಕರಿಗೆ ದೊರೆಯಲಿದೆ.
ಇದರೊಂದಿಗೆ ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಸಾಲಸೌಲಭ್ಯ, ಎಕ್ಸ್ ಚೇಂಜ್ ಆಫರ್ ಮೊದಲಾದವುಗಳು ಗ್ರಾಹಕರಿಗೆ ದೊರೆಯಲಿದೆ. ಆ.31 ಮತ್ತು ಸೆ.7 ಆದಿತ್ಯವಾರವೂ ಸಂಸ್ಥೆ ತೆರೆದಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.
ಎಲ್.ಜಿ.ಫೆಸ್ಟಿವಲ್
ಅಡ್ಕಾರ್ ಮಹೋತ್ಸವ ಸಂದರ್ಭದಲ್ಲಿ ಪ್ರತಿಷ್ಠಿತ ಎಲ್ ಜಿ ಕಂಪೆನಿ ಎಲ್ ಜಿ ಮಹೋತ್ಸವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಎಲ್ ಜಿ ಉತ್ಪನ್ನಗಳ ಮೇಲೆ ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಟಿ.ವಿ.ಗಳ ಮೇಲೆ ಮೂರು ವರ್ಷ ವಾರಂಟಿ, 26% ಕ್ಯಾಶ್ ಬಾಕ್, ಒಂದು ಇಎಂಐ ಉಚಿತ, ಒವೆನ್ ಮೇಲೆ 5 ವರ್ಷ ವಾರಂಟಿ ನೀಡುತ್ತಿದೆ. ಇನ್ನೂ ಅನೇಕ ಆಫರ್ ಗಳನ್ನು ಕಂಪೆನಿ ಘೋಷಿಸಿದೆ. ಅಡ್ಕಾರ್ ಮಹೋತ್ಸವ ಸಂದರ್ಭದ
ಆಗಸ್ಟ್ 30,31ರಂದು ಎಲ್.ಜಿ. ಒವೆನ್ ಲೈವ್ ಡೆಮೋ ನಡೆಯಲಿದೆ
ಪಾದಾರ್ಪಣೆಯ ಪ್ರಯುಕ್ತ ಗಣಹೋಮ
ಅಡ್ಕಾರ್ ಇಲೆಕ್ಟ್ರಾನಿಕ್ಸ್ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಇಂದು ಬೆಳಿಗ್ಗೆ ಸಂಸ್ಥೆಯಲ್ಲಿಗಣಪತಿ ಹೋಮ ನಡೆಯಿತು. ಪುರೋಹಿತ ನಾಗರಾಜ್ ಭಟ್ ಪೂಜಾ ಕಾರ್ಯ ನೆರವೇರಿಸಿದರು. ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್, ಶ್ರೀಮತಿ ಚೈತ್ರ ದಿನೇಶ್ ಮತ್ತು ಸಿಬ್ಬಂದಿಗಳು, ಹಿತೈಷಿಗಳು ಉಪಸ್ಥಿತರಿದ್ದರು.










