ನಿಂತಿಕಲ್ಲು : ಎಣ್ಮೂರು – ಮುರುಳ್ಯ ಸೊಸೈಟಿ ವಾರ್ಷಿಕ ಮಹಾಸಭೆ

0

ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಆ. 24ರಂದು ಸಂಘದ ಅಧ್ಯಕ್ಷ ವಸಂತ ನಡುಬೈಲುರವರ ಅದ್ಯಕ್ಷತೆಯಲ್ಲಿ ಸಂಘದ ಪ್ರದಾನ ಕಚೇರಿಯ ಸಾಧನ ಸಹಕಾರ ಸೌದದಲ್ಲಿ ನಡೆಯಿತು.

ಸಂಘದ ಮಾಜಿ ಉಪಾಧ್ಯಕ್ಷೆ, ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ” ಸಂಘ ಬೆಳೆದು ಬಂದ ರೀತಿಯನ್ನು ವಿವರಿಸಿ ಸಂಘದ ಸದಸ್ಯ ರೈತರ ಸದಾ ಚಟುವಟಿಕೆ ಮತ್ತು ಪ್ರೋತ್ಸಾಹದಿಂದ ಸಂಘ ಇಷ್ಟು ಎತ್ತರ ಬೆಳೆಯಲು ಸಾಧ್ಯವಾಯಿತು” ಎಂದು ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ನಾಗೇಶ್ ಆಳ್ವ ಕೆ, ನಿರ್ದೇಶಕರುಗಳಾದ ರೂಪರಾಜ ರೈ ಕೆ, ಅನೂಪು ಬಿಳಿಮಲೆ ಮುರುಳ್ಯ, ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮುರು, ನೇಮಿಶ ಕೆ. ಮುರುಳ್ಯ, ದಿನೇಶ್ ಪಿ. ಮುರುಳ್ಯ, ವಸಂತ ಎಚ್.ಕೆ ಎಣ್ಮುರು, ಶ್ರೀಮತಿ ಸುಧಾರಾಣಿ ಮುರುಳ್ಯ, ಶ್ರೀಮತಿ ನವ್ಯಶ್ರೀ ಕೆ.ಬಿ, ಮುತ್ತಪ್ಪ ಎಸ್ ಮುರುಳ್ಯ, ಶಿವರಾಮ ಸಿ, ವಲಯ ಮೇಲ್ವಿಚಾರಕ ಪ್ರದೀಪ್ ಕೆ ವೇದಿಕೆಯಲ್ಲಿದ್ದರು.

ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಹತ್ತನೇ ತರಗತಿ ಮತ್ತು ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.

ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಿದಾನಂದ ರೈ ಸ್ವಾಗತಿಸಿ ನಿರೂಪಣೆ ಮಾಡಿದರು.

ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ