ಸುಳ್ಯದಲ್ಲಿ ಕಳೆದ 25 ವರ್ಷಗಳಿಂದ ನೆಲೆಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ, ಮುಂದೆ ಬೆಂಗಳೂರಿನಲ್ಲಿ ನೆಲೆಸಲು ತೆರಳುತ್ತಿರುವ ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ, ಸಾಹಿತಿ ಹೆಚ್ ಭೀಮರಾವ್ ವಾಷ್ಟರ್ ಕೋಡಿಹಾಳ ಇವರಿಗೆ ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ಸುಳ್ಯ ಇದರ ವತಿಯಿಂದ ಸುಳ್ಯದ ಕನ್ನಡ ಭವನದಲ್ಲಿ ಭೀಮರಾವ್ ವಾಷ್ಠರ್ ಉತ್ಸವ
ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಆ. 24ರಂದು ನಡೆಯಿತು.
















ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಲೇಖಕ ಪ್ರಭಾಕರ ಶಿಶಿಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಮತ್ತು ಕರ್ನಾಟಕ ಭಾವೈಕತಾ ಪರಿಷತ್ ಅಧ್ಯಕ್ಷ ಇಟ್ಬಾಲ್ ಬಾಳಿಲ ಅಭಿನಂದನಾ ಮಾತುಗಳನ್ನಾಡಿದರು.

ಬೆಳಕು ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿ ಗೌಡ, ಹಿರಿಯ ಸಾಹಿತಿಗಳಾದ ವೈಲೇಶ್ ಪಿ ಎಸ್ ಕೊಡಗು, ಹಾ. ಮ. ಸತೀಶ್ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು, ಖ್ಯಾತ ಕವಾಯತ್ರಿ, ಶಿಕ್ಷಕಿ ಸಂಧ್ಯಾ ಕುಮಾರ್ ಉಬರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಘಟಕ, ಗಾಯಕ ಲಕ್ಷ್ಮಣ್ ಪೆರುಮಾಳ್ ಕಾರ್ಯಕ್ರಮ ಸಂಘಟಿಸಿದ್ದರು.
ಕವಯತ್ರಿ ಅನುರಾಧ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮ ತೋಟಪ್ಪಾಡಿ ವಂದಿಸಿದರು.











