ಅಜ್ಜಾವರ : ವರ್ಗಾವಣೆಗೊಂಡ ಆರೋಗ್ಯ ಸಹಾಯಕಿಯವರಿಗೆ ಬೀಳ್ಕೊಡುಗೆ

0

ಅಜ್ಜಾವರ ಗ್ರಾಮ ವ್ಯಾಪ್ತಿಯಲ್ಲಿ ಅರೋಗ್ಯ ಸಹಾಯಕಿಯಾಗಿ ಸುಮಾರು 21 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀಮತಿ ಜಯಶ್ರೀ ಪಡ್ಡಂಬೈಲುರವರಿಗೆ ವರ್ಗಾವಣೆಯಾಗಿದ್ದು, ಅವರಿಗೆ ಅಜ್ಜಾವರ ಪಂಚಾಯತ್ ವತಿಯಿಂದ ಬೀಳ್ಕೊಡುಗೆ ನಡೆಯಿತು.

ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೇವಕಿ ವಿಷ್ಣುನಗರ ಸನ್ಮಾನ ನೆರವೇರಿಸಿದರು. ಸನ್ಮಾನಗೊಂಡ ಶ್ರೀಮತಿ ಜಯಶ್ರೀಯವರು ತಮ್ಮ ಮಾತುಗಳನ್ನಾಡಿದರು.

ಪ್ರಸಾದ್ ಕುಮಾರ್ ರೈ ಮೇನಾಲರು ಅನಿಸಿಕೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಬ್ದುಲ್ಲ ಎ, ಸದಸ್ಯರಾದ ಸತ್ಯವತಿ ಬಸವನಪಾದೆ, ಲೀಲಾಮನಮೋಹನ ಮುಡೂರು, ಬೇಬಿ ಕಲ್ತಡ್ಕ, ಜಯರಾಮ ಅತ್ಯಡ್ಕ, ವಿಶ್ವನಾಥ ಮುಳ್ಯಮಠ, ರವಿರಾಜ್ ಕರ್ಲಪ್ಪಾಡಿ, ದಿವ್ಯ ಹೆಚ್, ಶ್ವೇತಾ ಕುಮಾರಿ, ರತ್ನಾವತಿ ಕಾಂತಮಂಗಲ, ಶಿವಕುಮಾರ್ ಮುಳ್ಯ ಹೊಸಗದ್ದೆ, ಪಂಚಾಯತ್ ಅಭಿವೖದ್ಧಿ ಅಧಿಕಾರಿ ಜಯಮಾಲಾ ಎ.ಕೆ, ಪಂಚಾಯತ್ ಸಿಬ್ಬಂದಿಗಳಾದ, ಹೇಮಾವತಿ, ಕಾರ್ತಿಕ್, ಲೀಲಾವತಿ, ಗ್ರಂಥಾಲಯ ಮೇಲ್ವಿಚಾರಕಿ ಲಕ್ಷ್ಮಿ ಕೆ
ಮೊದಲಾದರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರು ಸ್ವಾಗತಿಸಿ, ಧನ್ಯವಾದ ಮಾಡಿದರು.