ಸುಳ್ಯಕ್ಕೆ ನೂತನ ನ್ಯಾಯಾಲಯ ಮಂಜೂರು ಮಾಡುವಂತೆ ಶಾಸಕರಿಂದ ಕಾನೂನು ಸಚಿವರಿಗೆ ಮನವಿ

0

ಕಾನೂನು ಸಚಿವರಾದ ಎಚ್.ಕೆ ಪಾಟೀಲ ಅವರಿಗೆ ಸುಳ್ಯ ಶಾಸಕರಾದ ಕು.ಭಾಗೀರಥಿ ಮುರುಳ್ಯ ಅವರು ಸುಳ್ಯಕ್ಕೆ ನೂತನ ನ್ಯಾಯಾಲಯ ಕಟ್ಟಡ ಹೊದಗಿಸಿ ಕ್ಕೊಡುವಂತೆ ಮನವಿ ಸಲ್ಲಿಸಿದ್ದಾರೆ.

ಸುಳ್ಯ ನ್ಯಾಯಲಯವು 50 ವರುಷಗಳ ಹಳೆಯದಾಗಿದ್ದು ಹಂಚಿನ ಮೇಲ್ಚಾವಣಿಯಲ್ಲಿ ಕಲಾಪಗಳು ನಡೆಯುತ್ತಿದೆ. ಮಳೆಗಾಲದಲ್ಲಿ ಹಲವಾರು ತೊಂದರೆಗಳನ್ನು ಮನಗಂಡು ನೂತನ ಸಂಕೀರ್ಣದ ಅವಶ್ಯಕತೆ ಇದೆ ಎಂದು ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ. ಮನವಿ ಸ್ವೀಕರಿಸಿದ ಸಚಿವರು ಶೀಘ್ರವಾಗಿ ಸರಕಾರದಿಂದ ಅನುದಾನವನ್ನು ಬಿಡುಗಡೆ ಮಾಡುತ್ತೆನೆಂದು ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.