ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 106 ನೇ ವಾರ್ಷಿಕ ಮಹಾಸಭೆ

0

ರೂ.272 ಕೋಟಿ ಒಟ್ಟು ವ್ಯವಹಾರ, 81.43ಲಕ್ಷ ನಿವ್ವಳ ಲಾಭ, ಶೇ. 10% ಡಿವಿಡೆಂಡ್

ಅಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 106 ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ರವರ ಅಧ್ಯಕ್ಷತೆಯಲ್ಲಿ ಆ. 25 ರಂದು ಸಂಘದ ವಜ್ರ ಮಹೋತ್ಸವ ಸಭಾಭವನದಲ್ಲಿ ನಡೆಯಿತು.

ಆರಂಭದಲ್ಲಿ ಅಗಲಿದ ಸಂಘದ ಸದಸ್ಯರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಂಘದಲ್ಲಿ ವರ್ಷದ ಅಂತಿಮ ಹಂತದಲ್ಲಿ 3003 ಮಂದಿ ಎ ವರ್ಗದ ಸದಸ್ಯರನ್ನು ಹೊಂದಿದೆ. ಒಟ್ಟು ಪಾಲು ಬಂಡವಾಳ ಮೊಬಲಗು 4.32 ಕೋಟಿ ಯಷ್ಟಿದೆ. 2024-25 ನೇ ವರ್ಷಾರಂಭದಲ್ಲಿ 24.86 ಕೋಟಿ ಠೇವಣಾತಿ ಇರುವುದು. ವರ್ಷದಲ್ಲಿ 22.47 ಕೋಟಿ ಕೃಷಿ ಸಾಲ ವಿತರಿಸಲಾಗಿದ್ದು, 32.26 ಕೋಟಿ ಕೃಷಿ ಸಾಲ ಹೊರ ಬಾಕಿ ಇರುವುದು. ಸಂಘದ ಒಟ್ಟು ವ್ಯವಹಾರ ರೂ. 2.72 ಕೋಟಿಯಷ್ಟಿರುತ್ತದೆ.
ಪ್ರಸ್ತುತ ವರ್ಷದಲ್ಲಿ ಸಂಘವು ನಿವ್ವಳ ಲಾಭ ರೂ. 81.43 ಲಕ್ಷ ಗಳಿಸಿಕೊಂಡು ಸದಸ್ಯರಿಗೆ ಶೇ 10% ಡಿವಿಡೆಂಡ್ ನೀಡಲಾಗಿದೆ.

ಕೃಷಿ ಸಾಲ ಮತ್ತು ಕೃಷಿಯೇತರ ಸಾಲ ಹೊರ ಬಾಕಿ ಒಟ್ಟು ಜುಮ್ಲ ರೂ. 39,19 ಕೋಟಿ ವ್ಯವಹಾರ ಹೊಂದಿದೆ.
ವ್ಯಾಪಾರ ವಿಭಾಗದಲ್ಲಿ 4.84 ಲಕ್ಷ ಮಾರಾಟದಿಂದ ಲಾಭ ಬಂದಿರುತ್ತದೆ.
ಸಂಘದ ವತಿಯಿಂದ
ಕನ್ನಡ ಮಾಧ್ಯಮದ ಸರಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಂಕ್ ಪಡೆದ ಇಬ್ವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮರಣ ಸಾಂತ್ವನ ಮಹಾ ಪ್ರಸ್ಥಾನ ನಿಧಿಯಿಂದ ಇತ್ತೀಚಿಗೆ ನಿಧನ ಹೊಂದಿದ ಸಂಘದ ಸದಸ್ಯರಿಗೆ ತಲಾ ರೂ. 10 ಸಾವಿರದಂತೆ ವಾರಿಸುದಾರರಿಗೆ
ನೀಡಲಾಗುತ್ತಿದ್ದು ಮರಣ ಸಾಂತ್ವನ ಮಹಾಪ್ರಸ್ಥಾನ ನಿಧಿಗೆ ದೇಣಿಗೆ ನೀಡಿದ 5 ಮಂದಿ ಪೋಷಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಅಲ್ಪಾವಧಿ ಸಾಲದ ಮಿತಿ ರೂ. 3 ಲಕ್ಷವನ್ನು 5 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಪತ್ರಿಕೆಗಳಲ್ಲಿ ಬಂದಿದೆ. ನಮ್ಮ ಸಂಘದಲ್ಲಿ ನೀಡಲಾಗುತ್ತಿದೆಯಾ ಎಂದು ಕೃಪಾಶಂಕರ ತುದಿಯಡ್ಕ ಪ್ರಶ್ನಿಸಿದರು.
ಬೇರೆ ಕಡೆಗಳಲ್ಲಿ ಕೊಡ್ತಿದ್ದಾರೆ ನಮ್ಮ ಸಂಘದಲ್ಲಿ ಯಾಕೆ ಕೊಡಲು ಬರುವುದಿಲ್ಲ ಎಂದು ಲೋಲಾಜಕ್ಷ ರವರು ಕೇಳಿದರು.
ಸರ್ಕಾರದಿಂದ ಯಾವುದೇ ರೀತಿಯ ಅನುಮೋದನೆಗೆ ಸುತ್ತೋಲೆ ಬಂದಿಲ್ಲ ಎಂದು ಮೇಲ್ವಿಚಾರಕರು ತಿಳಿಸಿದರು.
ಎನ್ ಸಿಸಿ ಮಿತಿ ನೋಡಿಕೊಂಡು ಅರ್ಹರಿಗೆ
5 ಲಕ್ಷದ ಮಿತಿ ನಿಗದಿ ಪಡಿಸಿ 2ಲಕ್ಷಕ್ಕೆ ಬಡ್ಡಿ ಹಾಕುವುದಾಗಿ ಸಾಲಗಾರರಿಗೆ ಮಾಹಿತಿ ನೀಡಿ ಸಾಲ ನೀಡಬಹುದಲ್ಲವೇ ಎಂದು ತೇಜಕುಮಾರ್ ರವರು ಸಲಹೆ ನೀಡಿದರು.
ಈ ರೀತಿಯ ವ್ಯವಸ್ಥೆಗೆ ಪ್ರತ್ಯೇಕ ಸಾಮಾನ್ಯ ಬಾಂಡ್ ತಯಾರಿಸಿಕೊಂಡು ನಿಯಮನುಸಾರ ಕೊಡಲು ಸಾಧ್ಯವಿದೆಯೇ ಎಂಬ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿಚಿಂತಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಅಡಿಟ್ ವರದಿಯ ಕುರಿತು ಕರುಣಾಕರ ಹಾಸ್ಪರೆಯವರು ಸಭೆಗೆ ವಿವರ ನೀಡಿದರು.

ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆಗೆಂದು ಹೋದಾಗ ಆಸ್ಪತ್ರೆಯಿಂದ ನಿರಾಕರಣೆ ಆಗುತ್ತಿದೆ. ಇದರಿಂದ ಸುಳ್ಯದಂತಹ ಪ್ರದೇಶದಲ್ಲಿ ಪ್ರಯೋಜನ ಸಿಗುತ್ತಿಲ್ಲ ಹಾಗಾಗಿ ರಿನೀವಲ್
ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಲೋಲಾಜಕ್ಷರು ತಿಳಿಸಿದರು.
ಸರಕಾರ ಜಾರಿ ಮಾಡಿದ ಯೋಜನೆ ಇದಾಗಿದ್ದು ಹಿಂದಿನ ಫಲಾನುಭವಿಗಳು ಪಡೆದ ಮೊತ್ತವನ್ನು ಅಸತ್ರೆಗೆ ಪಾವತಿ ಮಾಡದೇ ಬಾಕಿ ಮಾಡಿರುವುದರಿಂದ ಲೋಕಲ್ ಆಸ್ಪತ್ರೆಯವರು ಹಿಂದೇಟು ಹಾಕುತ್ತಿದ್ದಾರೆ ಎಂದು ದೇವಪ್ಪ ನಾಯ್ಕ್ ರವರು ಪ್ರಸ್ತಾಪಿಸಿದರು.

ಸರ್ಕಾರದ ಯೋಜನೆ ಹೇಳಿದ ನಂತರ ಅದಕ್ಕೆ ಆಸ್ಪತ್ರೆಗಳನ್ನು ಅದಾಗಲೇ ಟೈ ಆಪ್ ಮಾಡಿಕೊಂಡಿರಬೇಕು. ಇಲ್ಲವಾದಲ್ಲಿ ಯೋಜನೆ ಇದ್ದು ಪ್ರಯೋಜನವಿಲ್ಲದ ಹಾಗಾಗುವುದು. ಇದಕ್ಕೆ ಸ್ಥಳೀಯ ಸಹಕಾರ ಸಂಘ ಗಳು ಒತ್ತಡ ಹಾಕಿ ಲೋಕಲ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಆಗುವಂತೆ ಮಾಡಬೇಕು. ನಗರ ವಾಸಿಗಳಿಗೆ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದ ಕೃಷಿಕರಿಗೆ ಪ್ರಯೋಜನ ಸಿಗುವಂತಾಗಬೇಕು ಎಂದು ವೆಂಕಟ್ರಮಣ ಭಟ್ ರವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಮುಂದಿನ ವರ್ಷದಲ್ಲಿ ಸದಸ್ಯರಿಗೆ ಹೊಸ ಯೋಜನೆಯನ್ನು
ತರಲಾಗುತ್ತಿದ್ದು
ಸದಸ್ಯರಿಗೆ ಚಿನ್ನಾಭರಣ ಖರೀದಿಗೆ ಶೇ. 75% ರಷ್ಟು ಸಾಲ ಶೇ. 9% ಬಡ್ಡಿ ದರದಲ್ಲಿ ನೀಡುವುದು. ಶೇ. 25% ರಷ್ಟು ಮಾತ್ರ ಸಾಲಗಾರ ಪಾವತಿಸಿದರಾಯ್ತು.ಖರೀದಿಸಿದ ಚಿನ್ನಾಭರಣವನ್ನು ಬ್ಯಾಂಕಿನ ಲಾಕರ್ ನಲ್ಲಿರಿಸಿ ಸಾಲದ ಮೊಬಲಗು ಪಾವತಿಯಾದ ನಂತರ ಚಿನ್ನಭಾರಣವನ್ನು
ವಾರಸುದಾರರಿಗೆ ನೀಡಲಾಗುವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಹರಿಪ್ರಸಾದ್ ಕಾಪುಮಲೆ, ನಿರ್ದೇಶಕರಾದ ಬಿ. ಶ್ರೀಪತಿ ಭಟ್, ಕರುಣಾಕರ ಹಾಸ್ಪರೆ, ಸುಧಾಕರ ಅಲೆಟ್ಟಿ, ಚಿದಾನಂದ ಕೆ, ಗಂಗಾಧರ ಬಿ. ಕೆ, ಧರ್ಮಪಾಲ ಕೆ, ಉಮೇಶ್ ಎಂ, ರಾಮದಾಸ, ಶ್ರೀಮತಿ ಉಷಾ ಹೆಚ್, ಶ್ರೀಮತಿ ವಿದ್ಯಾ ಜಿ. ಆರ್, ವಲಯ ಮೇಲ್ವಿಚಾರಕ ರತನ್ ಕೆ. ಎಸ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
ದಿನಕರ ರವರು ವಾರ್ಷಿಕ ವರದಿ ಮಂಡಿಸಿದರು.
ಸಿಬ್ಬಂದಿ ಪ್ರವೀಣ್ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಸ್ವಾಗತಿಸಿದರು. ಕರುಣಾಕರ ಹಾಸ್ಪರೆ ವಂದಿಸಿದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.

ಸದಸ್ಯರ ನೋಂದಾವಣೆಗೆ ಅಲೆಟ್ಟಿ, ಕೊಲ್ಚಾರು,
ಅರಂಬೂರು
3 ಕೌಂಟರ್ ಗಳನ್ನು ತೆರೆಯಲಾಗಿತ್ತು.
ಆಗಮಿಸಿದ ಎಲ್ಲಾ ಸದಸ್ಯರಿಗೆ ಬೆಳಗ್ಗಿನ ಉಪಹಾರ ಹಾಗೂ ಮದ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.