ಪಂಜ ದೇಗುಲದ ಕದಿರು ಗದ್ಧೆಯಿಂದ ಕದಿರು ತೆಗೆಯುವ ಮುಹೂರ್ತ

0

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿoಗೇಶ್ವರ ದೇಗುಲದ ಕದಿರು ಗದ್ಧೆಯಿಂದ ಕದಿರು ತೆಗೆಯುವ ಮುಹೂರ್ತ ಆ.26 ರಂದು ನಡೆಯಿತು .

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಪಂಜ ಪಂಚಶ್ರೀ ಜೇಸಿಐ ಅಧ್ಯಕ್ಷರಾದ ವಾಚಣ್ಣ ಕೆರೆಮೂಲೆ, ಪಂಜ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಗುರುಪ್ರಸಾದ್ ತೋಟ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ಧೆ, ಕೋಶಾಧ್ಯಕ್ಷ ಜನಾರ್ಧನ ನಾಗತೀರ್ಥ,ಆಹಾರ ಸಂಚಾಲಕರಾದ ಕುಸುಮಾಧರ ಕೆರೆಯಡ್ಕ, ಕೃಷ್ಣ ವೈಲಾಯ, ಧರ್ಮಪಾಲ ದಾಸ್ ನಾಗತೀರ್ಥ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ಧರು.

ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಕದಿರು ಗದ್ಧೆಗೆ ಪೂಜೆ ಮಾಡಿ ಕದಿರು ತೆಗಯುವ ಮುಹೂರ್ತ ಮಾಡಿದರು.