ಸಂಪಾಜೆ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ವತಿಯಿಂದ ಗೌರಿ ಗಣೇಶೋತ್ಸವ

0

ಸಂಪಾಜೆ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ವತಿಯಿಂದ ಗೌರಿ ಗಣೇಶೋತ್ಸವ ನಡೆಯಿತು ಇಂದು ಬೆಳಿಗ್ಗೆ ಸುದರ್ಶನ ಭಟ್ ರವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ಪೂರ್ವಾಹ್ನ ಶ್ರೀ ಗೌರಿ ಗಣೇಶ ರಮೂರ್ತಿಗಳನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ತಂದು ಸ್ಥಳ ಶುದ್ದಿಯೊಂದಿಗೆ ಉತ್ಸವದಲ್ಲಿ ಪ್ರತಿಷ್ಠಾಪನೆ ಲಲಿತ ಸಹಸ್ರನಾಮ ಪಠಣ ಮಹಾಮಂಗಳಾರತಿ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರು, ಪದಾಧಿಕಾರಿಗಳು, ಸರ್ವ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದು ಗೌರಿ ಗಣೇಶನ ಪ್ರಸಾದವನ್ನು ಸ್ವೀಕರಿಸಿದರು.