















ಆ. 15ರಂದು ನಿಧನರಾದ ಕೇನ್ಯ ಗ್ರಾಮದ ನರಿಯಂಗ ಕುಂಞ ನಾಯ್ಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆ. 26ರಂದು ಮೃತರ ಸ್ವಗೃಹ ದಿಗಂತ ನಿಲಯದಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಪಂಜ ಇದರ ಕಾರ್ಯದರ್ಶಿ ಕರುಣಾಕರ ಎಣ್ಣೆಮಜಲು ಮೃತರಿಗೆ ನುಡಿನಮನ ಸಲ್ಲಿಸಿದರು. ಸುದ್ದಿ ಪತ್ರಿಕೆಯ ವರದಗಾರ ಈಶ್ವರ ವಾರಣಾಶಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಮೃತರ ಪತ್ನಿ ಶ್ರೀಮತಿ ಹೊನ್ನಮ್ಮ, ಪುತ್ರರಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉದ್ಯೋಗಿಯಾಗಿರುವ ರವೀಂದ್ರ, ಕೃಷಿಕ ಗೋಪಾಲ, ಸೊಸೆಯಂದಿರಾದ ಶ್ರೀಮತಿ ವಿಮಲ ರವೀಂದ್ರ, ಶ್ರೀಮತಿ ವೀಣಾ ಗೋಪಾಲ್, ಪುತ್ರಿ ಶ್ರೀಮತಿ ನಳಿನಿ ಶಶಿಧರ ಪುತ್ತೂರು, ಸಹೋದರ ಗೋವಿಂದ ನಾಯ್ಕ ಗೇರುಕಟ್ಟೆ ಸೇರಿದಂತೆ ಮೊಮ್ಮಕ್ಕಳು ಕುಂಞ ನಾಯ್ಕರ ಕುಟುಂಬಸ್ಥರು ಹಾಗೂ ಬಂದು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು.



