ತೆನ್ಕಾಯಿ ಮಲೆ ಕಿರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

0

ನಾಯಕ ನಟಿಯಾಗಿ ಸುಳ್ಯದ ಶ್ರೇಯಾ ಸೇರಿದಂತೆ ಕೆಲ ಮಂದಿಯ ಅಭಿನಯ

ಇನ್ಸ್ಪೈರ್ ಫಿಲಂ ಅರ್ಪಿಸುತ್ತಿರುವ ಅಜ್ಜನ ಮಾಯೆ ಕಿರುಚಿತ್ರ ಖ್ಯಾತಿಯ ರವಿಚಂದ್ರ ರೈ ಮುಂಡೂರು ನಿರ್ದೇಶನದ ಬಹು ನಿರೀಕ್ಷಿತ ತೆನ್ಕಾಯಿ ಮಲೆ ಕಿರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಶ್ರೀ ಗುರು ರಾಘವೇಂದ್ರ ಮಠ ಕಲ್ಲಾರೆ ಪುತ್ತೂರು ಇಲ್ಲಿ ನಡೆಯಿತು.

ಅಗಸ್ಟ್ 24 ರಂದು ಪುತ್ತೂರಿನ ರಾಘವೇಂದ್ರ ಮಠ ಕಲ್ಲಾರೆ ಯಲ್ಲಿ ನಡೆದ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕಾರ್ಯಕ್ರಮವನ್ನು ಹಿರಿಯರಾದ ಪೂವಪ್ಪ ರವರ ಆಶೀರ್ವಾದದೊಂದಿಗೆ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮ ಚಾವಡಿ ಚಿತ್ರದ ನಿರ್ಮಾಪಕ ಜಗದೀಶ್ ಅಮೀನ್ ನಡುಬೈಲು, ಮಾಯಿ ಕಿರು ಚಿತ್ರದ ನಿರ್ಮಾಪಕ ಅಜಿತ್ ಬಿ ಟಿ , ಸುಶಾಂತ್ ಆಚಾರ್ಯ, ಪ್ರಮಿತ್ ರಾಜ್ ಕಟ್ಟತ್ತಾರು, ಪ್ರಮೀಳಾ ಶೆಟ್ಟಿ , ಗಣೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ಚಲನಚಿತ್ರ ಹಾಗೂ ರಂಗಭೂಮಿ ನಟ ಚೇತನ್ ರೈ ಮಾಣಿ ಇವರು ಚಿತ್ರಕ್ಕೆ ಶುಭ ಹಾರೈಸಿದರು.

ಅದೇ ರೀತಿ ಚಿತ್ರದ ನಿರ್ದೇಶಕ ರವಿಚಂದ್ರ ರೈ ಮುಂಡೂರು ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭದಲ್ಲಿ ತಂಡದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞಾನರು
ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಚಿತ್ರದ ನಾಯಕಿ ಶ್ರೇಯಾ ಸುಳ್ಯ ನಿರೂಪಿಸಿದರು.

ಚಿತ್ರದಲ್ಲಿ ಪ್ರಮುಖವಾಗಿ ಚಲನಚಿತ್ರರಂಗದ ಪ್ರಖ್ಯಾತ ನಟರಾದ ದೀಪಕ್ ರೈ ಪಾಣಾಜೆ , ಚೇತನ್ ರೈ ಮಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ .
ಷಣ್ಮುಖ ಪ್ರಸಾದ್ ಛಾಯಾಗ್ರಾಹಕರಾಗಿ ,
ಮ್ಯೂಸಿಕ್ ಡೈರೆಕ್ಟರ್ ಆಗಿ ನಿಶ್ಚಿತ್ ರಾಜ್ ಹಾಗೂ ಪೋಸ್ಟರ್ ಸಂಕಲನದಲ್ಲಿ ಪ್ರಸನ್ನ ರೈ ಹಾಗೂ ಚಿತ್ರದ ಸಂಕಲನವನ್ನು ಸಾಯಿ ಚರಣ್ ರೈ, ನಿರ್ದೇಶನ ವಿಭಾಗದಲ್ಲಿ ಹೃದಯಿ , ಕೀರ್ತನ್ ಶೆಟ್ಟಿ ಸುಳ್ಯ, ಅಶ್ವಥ್ , ಪ್ರವೀಣ್ ಕಾರ್ಯನಿರ್ವಹಿಸಿದ್ದಾರೆ .